ಮಂಗಳವಾರ, ಜೂನ್ 28, 2022
21 °C

ಹಾಸನ ಕ್ಷೇತ್ರದಿಂದ ಭವಾನಿ ಶಾಸಕರಾಗುತ್ತಾರೆ ಎಂದ ರೇವಣ್ಣ: ಗೊತ್ತಿಲ್ಲ ಎಂದ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಹಾಸನ ವಿಧಾನಸಭಾ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ಹಾಗೂ ಭವಾನಿ ಒಂದಲ್ಲ ಒಂದು ದಿನ ಎಂಎಲ್‌ಎ ಆಗ್ತಾರೆ ಎಂಬ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ’ ಎಂದು ಭವಾನಿ ರೇವಣ್ಣ ಸೋಮವಾರ ಹೇಳಿದರು.

‘ನಾನು ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆಯಾಗಿಲ್ಲ. ನನ್ನ ಅನುಪಸ್ಥಿತಿಯಲ್ಲಿ ರೇವಣ್ಣ ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ವರಿಷ್ಠರ ನಿರ್ಧಾರಕ್ಕೆ ಬದ್ಧ: ‘ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರು ಬದ್ಧರಾಗಿರುತ್ತೇವೆ. ನಾನುನಾನು ಟಿಕೆಟ್ ಆಕಾಂಕ್ಷಿಯಾಗಿ ಹೊಸದಾಗಿ ಜನರನ್ನು ಭೇಟಿ ಮಾಡುತ್ತಿಲ್ಲ. ಕಾರ್ಯಕ್ರಮ ಆಯೋಜಿಸುತ್ತಿಲ್ಲ. ರೇವಣ್ಣ ಅವರು ಸಚಿವರಾದಾಗಿನಿಂದಲೂ ಅವರಿಗೆ ಸಾಥ್ ಕೊಡುವ ಮೂಲಕ ಜನರನ್ನ ಹತ್ತಿರದಿಂದ ನೋಡುತ್ತಿದ್ದೇನೆ’ ಎಂದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹುಟ್ಟು ಹಬ್ಬವನ್ನು ನಗರದ ಹೊರವಲಯದ ಕಾಮಧೇನು ಚೈತನ್ಯ ವೃದ್ಧಾಶ್ರಮದಲ್ಲಿ ಹಿರಿಯರೊಂದಿಗೆ ಸೋಮವಾರ ಆಚರಿಸಲಾಯಿತು. ಜಿ ಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ, ಮಾಜಿ ಉಪಾಧ್ಯಕ್ಷ ಸ್ವರೂಪ್ ಪ್ರಕಾಶ್ ಇತರರು ಇದ್ದರು

ವೃದ್ಧಾಶ್ರಮದಲ್ಲಿ ಹೆಚ್‌ಡಿಡಿ ಹುಟ್ಟುಹಬ್ಬ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಹುಟ್ಟು ಹಬ್ಬವನ್ನು ನಗರದ ಹೊರವಲಯದ ಕಾಮಧೇನು ಚೈತನ್ಯ ವೃದ್ಧಾಶ್ರಮದಲ್ಲಿ ಹಿರಿಯರೊಂದಿಗೆ ಸೋಮವಾರ ಆಚರಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ ಕೇಕ್ ಕತ್ತರಿಸಿದರು. ವೃದ್ಧಾಶ್ರಮವಾಸಿಗಳಿಗೆ ಹಣ್ಣು ವಿತರಣೆ ಜೊತೆಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸ್ವರೂಪ್ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಕಾಮಧೇನು ವೃದ್ದಾಶ್ರಮದ ಪದಾಧಿಕಾರಿಗಳಾಧ ಮಾಧವ ಶಣೈ , ರಾಜಣ್ಣ ಮುತ್ತತ್ತಿ, ವೆಂಕಟರಾಮ್, ರಾಜು ಗೊರೂರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು