ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ವಿಜಯ್‌ಕುಮಾರ್‌ ಮೇಲೆ ಹಲ್ಲೆ: ಪ್ರೀತಂಗೌಡ ಬೆಂಬಲಿಗರಿಂದ ಕೃತ್ಯ ಆರೋಪ

Published 12 ಏಪ್ರಿಲ್ 2024, 15:41 IST
Last Updated 12 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಹಾಸನ: ನಗರದ ಎಂ.ಜಿ. ರಸ್ತೆಯಲ್ಲಿ ಇರುವ ಬಿಜೆಪಿ ಯುವ ಮುಖಂಡ ಐನೆಟ್ ವಿಜಯ್‌ಕುಮಾರ್ ಅವರ ಕಚೇರಿ ಮೇಲೆ 20 ಕ್ಕೂ ಹೆಚ್ಚು ಮಂದಿ ಕಿಡಿಗೇಡಿಗಳು ಶುಕ್ರವಾರ ದಾಳಿ ಮಾಡಿದ್ದು, ವಿಜಯ್‌ಕುಮಾರ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಚೇರಿ ಗಾಜುಗಳನ್ನು ಒಡೆದು ಹಾಕಲಾಗಿದ್ದು, ಪ್ರೀತಂಗೌಡ ಬೆಂಬಲಿಗರು ಈ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಐನೆಟ್‌ ವಿಜಯ್‌ಕುಮಾರ್‌, ‘ಕಚೇರಿಗೆ ಬಂದ ಕೆಲವರು ಮಾತನಾಡೋಣ ಬನ್ನಿ ಎಂದು ಕರೆದರು. ಅದಕ್ಕೆ ಮಾತಾಡೋಣ ಬನ್ನಿ ಎಂದೆ. ಪ್ರೀತಂಗೌಡ ಬಗ್ಗೆ ಮಾತನಾಡುತ್ತಿಯಾ ಎಂದು ಹಲ್ಲೆ ಮಾಡಿದರು. 100–150 ಕ್ಕೂ ಹೆಚ್ಚು ಜನರಿದ್ದರು. ಪ್ರೀತಂಗೌಡ ಕಡೆಯವರು ಈ ರೀತಿ ಮಾಡಿದ್ದಾರೆ’ ಎಂದು ಹೇಳಿದರು.

ಹಾಸನ ಲೋಕಸಭೆ ಕ್ಷೇತ್ರದಲ್ಲಿ ಕೆಲ ಬಿಜೆಪಿ ಮುಖಂಡರು, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಚಾರ ಆರಂಭಿಸಿದ್ದರು. ಶಾಸಕ ಪ್ರೀತಂ ಗೌಡ ಬೆಂಬಲಿಗರು ಇತ್ತೀಚಿಗಷ್ಟೇ ಬೂತ್ ಮಟ್ಟದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಶುರು ಮಾಡಿದ್ದರು.

ಆರಂಭದಲ್ಲಿಯೇ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು, ಐನೆಟ್‌ ವಿಜಯ್‌ಕುಮಾರ್ ಸೇರಿದಂತೆ ಹಲವು ಬಿಜೆಪಿ ಮುಖಂಡರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದರು. ಅದಾದ ಬಳಿಕ ‘ಎಲ್ಲರಿಗೂ ಒಂದೇ ಮತ. ಯಾರು ಯಾರನ್ನೂ ಸೋಲಿಸಲು ಆಗುವುದಿಲ್ಲ’ ಎಂದು ಐನೆಟ್ ವಿಜಯ್‌ಕುಮಾರ್‌ ಅವರು ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಪ್ರೀತಂಗೌಡ ಬೆಂಬಲಿಗರು, ಈ ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಆಸ್ಪತ್ರೆಗೆ ಭೇಟಿ: ಹಾಸನದ ಹಿಮ್ಸ್‌ ಆಸ್ಪತ್ರೆಗೆ ದಾಖಲಾಗಿರುವ ಐನೆಟ್‌ ವಿಜಯ್‌ಕುಮಾರ್‌ ಅವರನ್ನು ಭೇಟಿ ಮಾಡಿದ ಜೆಡಿಎಸ್‌ ಶಾಸಕ ಸ್ವರೂಪ್‌ ಪ್ರಕಾಶ್‌, ಭವಾನಿ ರೇವಣ್ಣ, ವಿಜಯ್‌ಕುಮಾರ್‌ ಅವರ ಆರೋಗ್ಯ ವಿಚಾರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT