ಸೋಮವಾರ, ಸೆಪ್ಟೆಂಬರ್ 26, 2022
20 °C

ಸಕಲೇಶಪುರ: ದೋಣಿಗಾಲ್ ಬಳಿ ಕೆರೆ ಒಡೆದು ಜಮೀನಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ತಾಲ್ಲೂಕಿನ ದೋಣಿಗಾಲ್ ಬಳಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗಿದ್ದ ಕೆರೆ ಒಡೆದಿದೆ.

ಚತುಷ್ಪಥಕ್ಕಾಗಿ ಗುತ್ತಿಗೆದಾರ ಕಂಪನಿ, ಹೆದ್ದಾರಿಯ ತಳಭಾಗದಲ್ಲಿ ನೀರು ಹರಿಯಲು ಪೈಪ್ ಹಾಕದೆ ಅವೈಜ್ಞಾನಿಕ ವಾಗಿ ಹಾಕಿದ್ದ ಸಾವಿರಾರು ಲಾರಿ ಲೋಡ್ ಮಣ್ಣಿನಿಂದ ಕೆರೆ ನಿರ್ಮಾಣವಾಗಿತ್ತು.

ಇದೀಗ ಮಳೆ ಹೆಚ್ಚಾಗಿದ್ದರಿಂದ ದೊಡ್ಡ ಕೆರೆ ಗುರುವಾರ ಮುಂಜಾನೆ ಒಡೆದಿದೆ‌. ಸುಮಾರು 50 ಎಕರೆ ಕೃಷಿ ಭೂಮಿಯಲ್ಲಿ ಇದ್ದ ಕಾಫಿ, ಭತ್ತ, ಅಡಿಕೆ ಮರಗಿಡಗಳು ಸಂಪೂರ್ಣ ಹಾನಿಗೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು