ಬೇಲೂರು: ಸರ್ಕಾರ ನಡೆಸುತ್ತಿರುವ ಜಾತಿಗಣತಿಗಳು ದೇಶಕ್ಕೆ ಮಾರಕವಾಗಿದ್ದು, ಜಾತಿ, ಜಾತಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಪುಷ್ಪಗಿರಿ ಮಠದ ಶ್ರೀಸೋಮಶೇಖರ ಶಿವಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ, ಮಹಿಳಾ ಘಟಕ ಹಾಗೂ ಯುವ ಘಟಕ ಮಂಗಳವಾರ ಆಯೋಜಿಸಿದ್ದ ಬಸವೇಶ್ವರ ಜಯಂತಿ ಆಚರಣೆಯಲ್ಲಿ ಅವರು ಆಶೀರ್ವಚನ ನೀಡಿದರು.

‘ ಎಲ್ಲಾ ಜಾತಿ, ಧರ್ಮಗಳು ಅಭಿಮಾನದಿಂದ ಸ್ವಂತ ಜಾತಿಗಳವರನ್ನಷ್ಟೇ ಗೌರವಿಸುವುದಾದರೆ, ಪ್ರತ್ಯೇಕ ಸಭೆ,ಸಮಾರಂಭಗಳನ್ನು ಮಾಡುತ್ತಿದ್ದರೆ ಎಲ್ಲ ವರ್ಗದವರನ್ನು ಒಂದುಗೂಡಿಸುವುದು ಹೇಗೆ ಎಂದು ಪ್ರಶ್ನಿಸಿದರು. ದೇಶದಲ್ಲಿರುವ 150 ಜಾತಿಗಳನ್ನು ಒಗ್ಗೂಡಿಸುವುದು ಕಷ್ಟಕರವಾದ ಕೆಲಸವಾಗಿದ್ದು, ಎಲ್ಲರನ್ನೂ ನಮ್ಮವರೆಂದು ಸ್ವೀಕರಿಸಿ ಎಂದು ಬಸವೇಶ್ವರ ತತ್ವವನ್ನು ವಿವರಿಸಿದರು.

ಎಲ್ಲ ದೇಶಗಳಲ್ಲಿ ಅಣುಬಾಂಬ್ ತಯಾರಿಸಲು ಮುಂದಾಗಿದ್ದು, ದೇಶ,ದೇಶಗಳ ನಡುವೆ, ಧರ್ಮಗಳ ಮಧ್ಯೆ, ಜಾತಿಗಳ ಮಧ್ಯೆ ಅಶಾಂತಿ ತಾಂಡವವಾಡುತ್ತಿದೆ, ಶಾಂತಿ ನೆಲೆಸಬೇಕಿದೆ ಎಂದರು.

ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪಗಿರಿ ಮಠದ ಸ್ವಾಮೀಜಿಯವರನ್ನು ವಿವಿಧ ಕಲಾತಂಡ, ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ನಾವು ಬಸವೇಶ್ವರರನ್ನು ನೋಡಿಲ್ಲ ಆದರೆ ಅವರ ರೂಪದಲ್ಲಿ ಸಿದ್ಧಗಂಗಾ ಶ್ರೀಗಳು, ತರಳಬಾಳು ಶ್ರೀಗಳು, ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ಹಾಗೂ ನಮ್ಮ ತಾಲ್ಲೂಕಿನ ಪುಷ್ಪಗಿರಿ ಶ್ರೀಗಳನ್ನು ನೋಡುತ್ತಿದ್ದೇವೆ. ಇಂದಿನ ಪ್ರಜಾಪ್ರಭುತ್ವ ಆಡಳಿತಕ್ಕೆ 12ನೇ ಶತಮಾನದಲ್ಲೇ ಭದ್ರಬುನಾದಿ ಹಾಕಿಕೊಟ್ಟ ಬಸವೇಶ್ವರರು ಇಂದು ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಕರೆಸಿಕೊಳ್ಳುತ್ತಿದ್ದಾರೆ. ಅವರ ಜೀವನವೇ ಆದರ್ಶವಾಗಿದೆ ಎಂದರು.

ಅಖಿಲ ಭಾರತ ವೀರಶೈವ,ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕ ಪ್ರಸನ್ನ ಮಾತನಾಡಿ, ವೀರಶೈವ ಮಹಾಸಭಾ ಪ್ರಾರಂಭವಾಗಿ 120 ವರ್ಷ ಕಳೆದರೂ ಒಳಪಂಗಡಗಳು ಶಾಪವಾಗಿ ಕಾಡುತ್ತಿವೆ .ಶ್ಯಾಮಾನೂರು ಶಿವಶಂಕರಪ್ಪ ಹೇಳಿದಂತೆ ಒಳಪಂಗಡಗಳ ನಡುವೆ ವಿವಾಹಗಳು ನಡೆದರೆ ಸಮಸ್ಯೆ ದೂರವಾಗುತ್ತದೆ ಎಂದರು.

ಮಹಾಸಭಾ ರಾಜ್ಯಘಟಕದ ಪ್ರದಾನಕಾರ್ಯದರ್ಶಿ ನಟರಾಜ್ ಮಾತನಾಡಿ, ಲೋಕಸಭೆಯಲ್ಲಿ ವೀರಶೈವರಿಗೆ ಒಂದೇ ಒಂದು ಕ್ಯಾಬಿನೆಟ್ ದರ್ಜೆಯ ಮಂತ್ರಿಸ್ಥಾನವನ್ನು ನೀಡದಿರುವುದು ಬೇಸರದ ವಿಷಯವಾಗಿದೆ ಎಂದರು.

ತಹಶೀಲ್ದಾರ್ ಎಂ.ಮಮತಾ ಮಾತನಾಡಿ, ಬವವಣ್ಣನವರು ವಚನ ಸಾಹಿತ್ಯದ ಮೂಲಕ ಪ್ರಜಾಪ್ರಭುತ್ವ ಮತ್ತು ಸಮಾನತೆಯ ಹರಿಕಾರರಾದವರು ಎಂದರು.

ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಅಡಗೂರು ಬಸವರಾಜು ಮಾತನಾಡಿ, ಮಳೆಯ ಕಾರಣದಿಂದ ಬಸವೇಶ್ವರರ ಜಯಂತಿಯನ್ನು ಅಂದು ಕೊಂಡ ರೀತಿಯಲ್ಲಿ ಆಚರಿಸಲಾಗಲಿಲ್ಲ ಎಂದರು.

ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಿದ ಎಪಿಎಂಸಿ ವರ್ತಕರಿಗೆ ಅಭಿನಂದಿಸಲಾಯಿತು. ಜೆಡಿಎಸ್ ಜಿಲ್ಲಾಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಬಿಜೆಪಿ ಜಿಲ್ಲಾಘಟಕದ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಮಹಾಸಭಾ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಬಲ್ಲೇನಹಳ್ಳಿ ರವಿಕುಮಾರ್, ರಾಷ್ಟ್ರೀಯ ಘಟಕದ ಉಪಾಧ್ಯಕ್ಷೆ ಬಿ.ಕೆ.ಚಂದ್ರಕಲಾ, ಜಿಲ್ಲಾಘಟಕದ ಅಧ್ಯಕ್ಷ ಪರಮೇಶ್, ರಾಜ್ಯ ಯುವಘಟಕದ ಕಾರ್ಯದರ್ಶಿ ವಿಕ್ರಮ್ ಕೌರಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಹಳೇಬೀಡು ಚೇತನ್, ನಿಕಟಪೂರ್ವ ಅಧ್ಯಕ್ಷ ಗೆಂಡೇಹಳ್ಳಿ ಚೇತನ್, ಪ್ರದಾನ ಕಾರ್ಯದರ್ಶಿ ಪಡುವಳಲು ಸುನೀಲ್, ತಾಲ್ಲೂಕು ಘಟಕದ ಉಪಾಧ್ಯಕ್ಷ ಅರುಣ್ ಕುಮಾರ್ , ಪ್ರದಾನಕಾರ್ಯದರ್ಶಿ ಬಳ್ಳೂರು ಮದನ್, ನಿರ್ದೇಶಕರಾದ ಹೆಬ್ಬಾಳು ಹಾಲಪ್ಪ, ಹರೀಶ್, ವಕೀಲ ನಿಂಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.