ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೀಕಾರ್ಡ್ ನಿರ್ದೇಶಕರಾಗಿ ಬಿ. ಕೇಶವ ಆಯ್ಕೆ

Published 7 ಜುಲೈ 2024, 16:28 IST
Last Updated 7 ಜುಲೈ 2024, 16:28 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪ್ರಾಥಮಿಕ ಭೂಅಭಿವೃದ್ದಿ ಸಹಕಾರ ಬ್ಯಾಂಕ್(ಪೀಕಾರ್ಡ್) ನಿರ್ದೇಶಕರಾಗಿ ಸರ್ಕಾರದಿಂದ ನಾಮನಿರ್ದೇಶನಗೊಂಡಿರುವ ಬಿ. ಕೇಶವ ಅವರನ್ನು ಬ್ಯಾಂಕ್ ಅಧ್ಯಕ್ಷ ಎಂ. ಶಂಕರ್ ಸೇರಿ ನಿರ್ದೇಶಕರು ಅಭಿನಂದಿಸಿದರು.

ಪಟ್ಟಣದಲ್ಲಿರುವ ಬ್ಯಾಂಕ್ ಕಚೇರಿಯಲ್ಲಿ ಶನಿವಾರ ಕೇಶವ ಅವರನ್ನು ಅಭಿನಂದಿಸಲಾಯಿತು  ಕೇಶವ ಮಾತನಾಡಿ,  ನಿರ್ದೇಶಕರ ಸಹಕಾರದಿಂದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಪ್ರಗತಿಗೆ ಶ್ರಮಿಸಲಾಗುವುದು ಎಂದರು.

ಪ್ರಾಥಮಿಕ ಭೂ ಅಭಿವೃದ್ಧಿ ಸಹಕಾರ ಭ್ಯಾಂಕ್ ಅಧ್ಯಕ್ಷ ಎಂ. ಶಂಕರ್ ಮಾತನಾಡಿ, 120 ರೈತರಿಗೆ ₹2.80 ಕೋಟಿ ಸಾಲ ನೀಡಲಾಗಿದೆ. ₹ 3.20 ಕೋಟಿ ಅಸಲು ಪಾವತಿಸಿದ್ದಾರೆ. ₹3.80 ಕೋಟಿ ಬಡ್ಡಿಮನ್ನಾ ಮಾಡಬೇಕಿದೆ. ₹4.89 ಕೋಟಿ ಸಾಲ ನೀಡಲು ಅವಕಾಶ ಇದೆ. ಟ್ರ್ಯಾಕ್ಟರ್ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.

ನೂತನ ನಿರ್ದೇಶಕ ಬಿ. ಕೇಶವ ಅವರನ್ನು ಬ್ಯಾಂಕ್ ನಿರ್ದೇಶಕರಾದ ಎನ್.ಟಿ. ಬೊಮ್ಮೇಗೌಡ, ಬಿ.ಎನ್. ಮಂಜುನಾಥ್, ಮುಖಂಡರಾದ ಶಂಕರ್, ಕೇಶವ, ರಂಗಸ್ವಾಮಿ,ರತ್ನರಾಜು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT