ಭಾನುವಾರ, ಆಗಸ್ಟ್ 1, 2021
22 °C

ಡ್ರಾಪ್ ಕೇಳಿ ಸರ ಕಳೆದುಕೊಂಡರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಮದುವೆಗೆ ಹೋಗಲು ವಾಹನಗಳಿಗೆ ಕಾದುಸುಸ್ತಾದ ಮಹಿಳೆಯೊಬ್ಬರು ಅಪರಿಚಿತರ ಬೈಕ್‌ನಲ್ಲಿ ಡ್ರಾಪ್‌ ಕೇಳಿ ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ಕಳೆದುಕೊಂಡಿದ್ದಾರೆ.

ತಾಲ್ಲೂಕಿನ ಬೆಳಗುಂಬ ಗ್ರಾಮದ ಕಾಳಮ್ಮ (65) ಸರ ಕಳೆದುಕೊಂಡವರು.

ಘಟನೆ ವಿವರ: ಕಾಳಮ್ಮ ಅವರು ತಿಪಟೂರು ತಾಲ್ಲೂಕಿನ ಮಡೆನೂರಿಗೆ ಮದುವೆಗೆ ಹೊರಟಿದ್ದರು. ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗೇಟ್‌ ಬಳಿ ವಾಹನಕ್ಕಾಗಿ ಕಾಯುತ್ತಿದ್ದರು. ಕಾದು ಬಹಳ ಹೊತ್ತಾದರೂ ಯಾವುದೇ ವಾಹನ ಬರಲಿಲ್ಲ. ಆ ವೇಳೆಗೆ ಬಂದ ಬೈಕ್‌ ಸವಾರರಲ್ಲಿ ಡ್ರಾಪ್‌ ಕೇಳಿದ್ದಾರೆ. ಇದಕ್ಕೆ ಒಪ್ಪಿದ ಸವಾರರು ಮಾರ್ಗ ಮಧ್ಯೆ ಇರುವ ಅರಣ್ಯ ಪ್ರದೇಶ ದೊಳಗೆ ಕಾಳಮ್ಮ ಅವರನ್ನು ಬಲ ವಂತವಾಗಿ ಕರೆದೊಯ್ದು ಸರ ಕಿತ್ತು ಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.

ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳ ಲಾಗಿದೆ ಎಂದು ಅರಸೀಕೆರೆ ಗ್ರಾಮಾಂತರ ಠಾಣೆಯ ಪಿಎಸ್ಐ ಬಸವರಾಜ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.