ಶನಿವಾರ, ಜುಲೈ 31, 2021
20 °C

ಬಾಲ್ಯ ವಿವಾಹ: ಯುವಕರಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ಗ್ರಾಮವೊಂದರ ಯೋಗೇಶ (27) ಹಾಗೂ ಹಾರಗೌಡನಹಳ್ಳಿಯ ರವಿಕುಮಾರ (28) ಬಂಧಿತರು. ಇವರಿಬ್ಬರು ಬಾಲಕಿಯರನ್ನು 2020 ಮೇ 5ರಂದು ಮದುವೆಯಾಗಿದ್ದರು. ಇತ್ತೀಚೆಗೆ ಇಬ್ಬರಿಗೂ ಗಂಡು ಮಗು ಜನಿಸಿತ್ತು.

ಬಾಲಕಿಯರು ತಾಯಿಯಾದ ವಿಷಯ ತಿಳಿದ ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಹಳ್ಳಿಮೈಸೂರು ಠಾಣೆಯ ಎಸ್ಐ ರಾಜಪ್ಪ ದೂರು ದಾಖಲಿಸಿಕೊಂಡಿದ್ದರು.

ಬಾಲಕಿಯರನ್ನು ವಿವಾಹವಾದ ಇಬ್ಬರನ್ನು ಏ.20ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತನಿಖಾಧಿಖಾರಿ ವೃತ್ತ ನಿರೀಕ್ಷಕ ಆರ್.ಪಿ. ಅಶೋಕ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು