ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯ

ಅಂಬೇಡ್ಕರ್ ಪುಣ್ಯಸ್ಮರಣೆ: ಸಾಮಾಜಿಕ ಸಾಮರಸ್ಯ ದಿನ
Last Updated 6 ಡಿಸೆಂಬರ್ 2022, 4:18 IST
ಅಕ್ಷರ ಗಾತ್ರ

ಹಾಸನ: ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಸ್ಟೂಡೆಂಟ್ ಫಾರ್ ಡೆವಲಪ್‌ಮೆಂಟ್ ವತಿಯಿಂದ ‘ಸಾಮಾಜಿಕ ಸಾಮರಸ್ಯ ದಿನ’ದ ಅಂಗವಾಗಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕೇಂದ್ರ ಗ್ರಂಥಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಸೋಮವಾರ ನಡೆಯಿತು.

ಗ್ರಂಥಾಲಯಕ್ಕೆ ಬರುವ ಸಾರ್ವಜನಿಕರು ಮತ್ತು ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು, ವಿದ್ಯಾರ್ಥಿಗಳು ಸೇರಿ, ಆವರಣವನ್ನು ಸ್ವಚ್ಛಗೊಳಿಸಿದರು.

ಎಬಿವಿಪಿ ನಗರ ಘಟಕದ ಅಧ್ಯಕ್ಷ ಕಾಂತರಾಜ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ಜೀವಮಾನದಲ್ಲಿ ಹೆಚ್ಚು ಹೋರಾಡಿದ್ದು ಸಮಾಜದ ಸಮಾನತೆಗೆ. ಅವರ ಜೀವನದಲ್ಲಿ ಆದ ನೋವು, ಅಸಮಾನತೆ ನೋಡಿ ಎಲ್ಲರೂ ಸಮಾನವಾಗಿ ಬದುಕಬೇಕು ಎಂದು ನಂಬಿದ್ದರು. ಉತ್ತಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ರಚನೆ ಮಾಡಿದ ಡಾ. ಅಂಬೇಡ್ಕರ್ ಅವರ ಆಶಯವನ್ನು ಇಂದಿಗೂ ಪಾಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕಾರ್ಯಕರ್ತ ಭರತ್ ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣ ಪಡೆಯಲು ಡಾ.ಅಂಬೇಡ್ಕರ್ ಕಾರಣ. ಸಂವಿಧಾನದಲ್ಲಿ ರೂಪಿಸಿದ ಕಾಯ್ದೆಯಿಂದ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ಸಿಕ್ಕಿದೆ. ಇಂತಹ ಮಹಾನ್ ನಾಯಕರಿಂದ ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಸಂವಿಧಾನ ರಚನೆ ಸಹಕಾರಿಯಾಯಿತು, ಭಾರತ ಬಲಿಷ್ಠವಾಗಲು ಸಂವಿಧಾನ ಆಶಯವನ್ನು ಉಳಿಸಿ ಬೆಳೆಸೋಣ ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೌಶಿಕ್ ಸಿ., ಕಾರ್ಯಕರ್ತರಾದ ಮನೋಜ್ ಕುಮಾರ್, ಪ್ರೀತಂ, ಉಮಾಪತಿ, ವಿದ್ಯಾರ್ಥಿಗಳಾದ ನಾಗರಾಜ್, ಅಬ್ದುಲ್, ಪವನ್, ಶ್ರೇಯಸ್, ಅಮೃತಾ ಇದ್ದರು.

ಕಸದ ತೊಟ್ಟಿಗೆ ಒತ್ತಾಯ

ಸ್ವಚ್ಛತಾ ಕಾರ್ಯಕ್ರಮ ವೇಳೆ ಗ್ರಂಥಾಲಯದ ಸುತ್ತ ಕಸ ವಿಲೇವಾರಿ ಆಗದಿರುವುದು ಕಂಡುಬಂದಿತು. ಈ ಸಂಬಂಧ ನಗರಸಭೆ ಗಮನಹರಿಸಬೇಕಿದ್ದು, ಕಸ ಸಂಗ್ರಹ ತೊಟ್ಟಿಯ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಕಾರ್ಯಕರ್ತರು ಆಗ್ರಹಿಸಿದರು.

ಸಂಗ್ರಹವಾದ ಕಸವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡುವಂತೆ ಹಾಗೂ ಪರಿಸರವನ್ನು ಸ್ವಚ್ಛತೆಯಿಂದ ಇಡಲು ಸಹಕರಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT