ಮಂಗಳವಾರ, ಸೆಪ್ಟೆಂಬರ್ 28, 2021
23 °C

ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿ: ಚಿಕ್ಕಮಗಳೂರು ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನರಾಯಪಟ್ಟಣ: ಪಟ್ಟಣದ ‘ಎ 1’ ಕ್ರೀಡಾ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ 16 ವರ್ಷದೊಳಗಿನ ಆಹ್ವಾನಿತ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಚಿಕ್ಕಮಗಳೂರಿನ ರಾಣಾ ತಂಡ ಪ್ರಥಮ ಸ್ಥಾನಗಳಿಸಿತು. ಮಂಗಳೂರಿನ ಕರಾವಳಿ
ತಂಡ ದ್ವಿತೀಯ ಸ್ಥಾನಗಳಿಸಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಣಾ ತಂಡ 20 ಓವರ್‌ಗಳಲ್ಲಿ  ಮೂರು ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು. ಈ ತಂಡದ ಆಟಗಾರ ಶ್ರವಣ್ ಬಾಬು. ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಕರಾವಳಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 80 ರನ್ ಗಳಿಸಿತು. ಪಮದ್ಯಪುರುಷ ಹಾಗೂ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಶ್ರವಣ್ ಬಾಬು ಪಡೆದುಕೊಂಡರೆ, ಅದೇ ತಂಡದ ವಿನಯ್ ಕುಮಾರ್, ಉತ್ತಮ ಬೌಲರ್ ಪ್ರಶಸ್ತಿ
ಪಡೆದರು. ಕರಾವಳಿಯ ಆಟಗಾರ ಪೂರನ್ ತಾಪಾ, ಆಲ್ ರೌಂಡರ್ ಪ್ರಶಸ್ತಿಗೆ ಭಾಜನರಾದರು.

ಎ.1 ಕ್ರೀಡಾ ಅಕಾಡೆಮಿಯ ನಿರ್ದೇಶಕರಾದ ರಂಗನಾಥ್, ಕೆ.ಎಲ್. ಯೋಗಣ್ಣ, ಪುರಸಭೆಯ ಮಾಜಿ ಉಪಾಧ್ಯಕ್ಷ ದಿನೇಶ್, ಸಮಾಜಸೇವಕ ಎಚ್.ಆರ್. ವೆಂಕಟೇಶ್, ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಬಿಜೆಪಿ ಮುಖಂಡ ಎ. ಮಂಜು ಫೈನಲ್
ಪಂದ್ಯವನ್ನು ವೀಕ್ಷಿಸಿ, ಶತಕ ಗಳಿಸಿದ ಶ್ರವಣ್ ಬಾಬು ಅವರನ್ನು ಅಭಿನಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು