ಹಿರೀಸಾವೆ ಹೋಬಳಿಯಲ್ಲಿ ಮಳೆ ಕೊರತೆಯಿಂದ ರಾಗಿ ಪೈರು ಬಿಸಿಲಿನಿಂದ ಒಣಗಿದೆ
ಮಹಾಲಯ ಅಮಾವಾಸ್ಯೆಗೆ ಮೊದಲು ರಾಗಿ ತೆನೆ ಹೊಡೆಯಬೇಕಿತ್ತು. ಆದರೆ ಮಳೆಯಾಗದೇ ಪೈರು ಒಣಗಿದೆ. ವಾರದಲ್ಲಿ ಮಳೆಯಾದರೆ ಫಸಲು ಸಂಪೂರ್ಣ ಕಡಿಮೆಯಾದರೂ ಜಾನುವಾರುಗಳಿಗೆ ಅಲ್ಪ ಸ್ವಲ್ಪ ಹುಲ್ಲು ಸಿಗುತ್ತದೆ.
ಗೋವಿಂದರಾಜ್ ಹೊಸಹಳ್ಳಿ ಗ್ರಾಮದ ರೈತ
ದೀರ್ಘಾವಧಿಯ ತಳಿಗಳನ್ನು ಬಿತ್ತನೆ ಮಾಡಿದ್ದ ರಾಗಿ ಪೈರು ಮಳೆ ಇಲ್ಲದೇ ಸಂಪೂರ್ಣ ಸುಟ್ಟುಹೋಗಿದೆ. ಅಲ್ಪಾವಧಿ ರಾಗಿ ಮತ್ತು ಹುರುಳಿ ಬಿತ್ತನೆ ಮಾಡಲು ರೈತರು ಮಳೆಯನ್ನು ಕಾಯುತ್ತಿದ್ದಾರೆ.