ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಲೂರು: ಅಪಾಯದ ‘ಅನಾಥ ಕೆರೆ’ ಹೂಳೆತ್ತಲು ಆಗ್ರಹ

ಈಜಲು ಹೋಗಿದ್ದ 4 ಮಕ್ಕಳು ಹೂಳಿನಿಂದ ಮೃತರಾದ ಪ್ರಕರಣ
Published 18 ಮೇ 2024, 5:19 IST
Last Updated 18 ಮೇ 2024, 5:19 IST
ಅಕ್ಷರ ಗಾತ್ರ

ಆಲೂರು: ಪಟ್ಟಣ ಪಂಚಾಯಿತಿ 4ನೇ ವಾರ್ಡಿನಲ್ಲಿರುವ ಕೆರೆಗೆ ವಾರಸುದಾರರು ಇಲ್ಲ. ಇದು ‘ಅನಾಥ ಕೆರೆ’ಯಾಗಿದ್ದು ಹೂಳೆತ್ತದಿರುವುದರಿಂದ ಜನ, ಜಾನುವಾರುಗಳ ಬಲಿಗಾಗಿ ಬಾಯಿ ತೆರೆದು ನಿಂತಿದೆ.

ಮುತ್ತಿಗೆ ಗ್ರಾಮದಲ್ಲಿ ಗುರುವಾರ ಈಜಲು ಹೋಗಿದ್ದ ನಾಲ್ಕು ಮಕ್ಕಳು ಹೂಳು ತುಂಬಿದ ಈ ಕೆರೆಗೆ ಧುಮುಕಿದಾಗ ಅದರಲ್ಲಿ ಸಿಲುಕಿ ಮೃತಪಟ್ಟಿದ್ದರು. ಕೆರೆಯ ಹೂಳೆತ್ತ ಬೇಕು. ಇಲ್ಲದಿದ್ದರೆ ಎಲ್ಲ ಅನಾ ಹುತಗಳಿಗೆ ಸರ್ಕಾರ ನೇರ ಕಾರಣ ವಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

‘ಪಟ್ಟಣ ಪಂಚಾಯಿತಿ ಅಧೀನಕ್ಕೆ ಜಾಗ ಸೇರಿದೆ. ಆದರೆ, ಕೆರೆ ಅಭಿವೃದ್ಧಿ ಕಾರ್ಯ ನಮಗೆ ಬರುವುದಿಲ್ಲ’ ಎಂದು ಪ. ಪಂ. ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ‘ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುತ್ತಾರೆ.

‘ಜಿಲ್ಲಾ ಪಂಚಾಯಿತಿ ನಮಗೆ ಅನುದಾನ ಕೊಟ್ಟರೆ ನಾವು ಅಭಿವೃದ್ಧಿ ಪಡಿಸುತ್ತೇವೆ’ ಎನ್ನುತ್ತಾರೆ. ಹೀಗಾಗಿ, ‘ಈ ಕೆರೆಯನ್ನು ಅನಾಥ ಕೆರೆ ಎಂದು ಘೋಷಿಸಿ, ಯಾವುದೇ ವ್ಯಕ್ತಿ ಈ ಜಾಗವನ್ನು ಪಡೆಯಲು ಅವಕಾಶ ನೀಡಬೇಕು’ ಎಂದು ಜನ ರು ಆಗ್ರಹಿಸಿದ್ದಾರೆ.

ಪಟ್ಟಣ ವ್ಯಾಪ್ತಿಯ ಶೇ 50 ಭಾಗದ ನೀರು ಹರಿದು ಈ ಕೆರೆಯನ್ನು ಸೇರುತ್ತದೆ. ಈವರೆಗೂ ಹೂಳೆತ್ತದ್ದರಿಂದ ಏರಿ ತುದಿವರೆಗೂ ಗಿಡಗಂಟಿ ಬೆಳೆದು ನಿಂತಿದೆ. ಭಾರಿ ಮಳೆ ಯಾದರೆ ನೀರು ತುಂಬಿ ಏರಿ ಒಡೆಯುವ ಸಾಧ್ಯತೆ ಇದೆ. ಜಾನುವಾರುಗಳು ಆಹಾರಕ್ಕಾಗಿ ಕೆರೆಗೆ ಇಳಿದರೆ ಮೇಲೆದ್ದು ಬರಲು ಸಾಧ್ಯವಾಗದೆ ಪ್ರಾಣ ಹಾನಿಯಾಗುವ ಸಂಭವವಿದೆ. ಏರಿ ಸಂಪರ್ಕ ರಸ್ತೆಯಾಗಿರುವುದರಿಂದ ಪ್ರತಿದಿನ ನೂರಾರು ವಾಹನಗಳು, ಜನಸಾಮಾನ್ಯರು ತಿರುಗಾಡುತ್ತಾರೆ. ಕೆರೆ ಸುತ್ತ ನಿವೇಶನಗಳಿವೆ. ಕೆರೆ  ಹೂಳು ತೆಗೆದು ನೀರು ಸಂಗ್ರಹವಾಗಲು ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್‌ಆದೇಶ ವಿದ್ದರೂ ಇಲಾಖೆ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ ಎಂದು ಸ್ಥಳೀಯರು ಹೇಳುತ್ತಾರೆ.

ಕೆರೆಗೆ ನೀರು ಹರಿಯುವ ಕಾಲುವೆಯನ್ನು ಶುಚಿಗೊಳಿಸಿ, ಚರಂಡಿಗಳಲ್ಲಿ ಸಂಗ್ರಹ ವಾಗುತ್ತಿರುವ ಕೊಳಚೆ ನೀರು ಸರಾಗವಾಗಿ ಕೆರೆಗೆ ಹರಿಯುವಂತೆ ಕ್ರಮ ಕೈಗೊಳ್ಳಬೇಕು. ಕೆರೆ ಸುತ್ತ  ಮನೆಗಳು ನಿರ್ಮಾಣವಾಗುತ್ತಿರುವುದರಿಂದ,  ಭಾರಿ ಮಳೆಯಾದರೆ ಅವಘಡ ಗಳನ್ನು ಎದುರಿಸ ಬೇಕಾಗುತ್ತದೆ ಎಂಬುದು ಜನರ ದೂರು.

ಅತಿ ಶೀಘ್ರದಲ್ಲಿ ಕೆರೆ ಸ್ಥಳ ಪರಿಶೀಲನೆ ಮಾಡಿ, ಹೂಳೆತ್ತುವ ಕಾಮಗಾರಿಗೆ ಕ್ರಮ ಕೈಗೊಳ್ಳುತ್ತೇನೆ. ಏರಿ ಸಂಪರ್ಕ ರಸ್ತೆಯಾಗಿರುವುದರಿಂದ ಹೂಳೆತ್ತುವ ಕಾರ್ಯ ಕೂಡಲೇ ಆಗಬೇಕು.
ಸಿಮೆಂಟ್ ಮಂಜು, ಶಾಸಕ
ಕೆರೆಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೂ ಅವುಗಳ ಅಭಿವೃದ್ಧಿ ಸಣ್ಣ ನೀರಾವರಿ ಇಲಾಖೆಗೆ ಸೇರಿದೆ. ಕೂಡಲೆ ತಹಶೀಲ್ದಾರ್ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಸ್ಟೀಫನ್ ಪ್ರಕಾಶ್, ಮುಖ್ಯಾಧಿಕಾರಿ, ಪ.ಪಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT