ಸೋಮವಾರ, ಅಕ್ಟೋಬರ್ 18, 2021
23 °C
ಇಸ್ರೋ ಸ್ಪೇಸ್ ಆನ್ ವ್ಹೀಲ್ಸ್ ಮೊಬೈಲ್ ಮ್ಯೂಸಿಯಂ ಪ್ರದರ್ಶನ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ; ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.

ನಗರದ ಗಂಧದ ಕೋಠಿ ಬಾಲಕಿಯರ ಸರ್ಕಾರಿ ವಿಭಜಿತ ಕಾಲೇಜು ಆವರಣದಲ್ಲಿ ಶುಕ್ರವಾರ ವಿಶ್ವ ಬಾಹ್ಯಾಕಾಶ ಸಪ್ತಾಹ ಅಂಗವಾಗಿ ಎಂಸಿಎಫ್ (ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ) ಹಮ್ಮಿಕೊಂಡಿದ್ದ ಇಸ್ರೋ ಸ್ಪೇಸ್ ಆನ್ ವ್ಹೀಲ್ಸ್ ಮೊಬೈಲ್ ಮ್ಯೂಸಿಯಂ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಂದು ವಿಷಯವನ್ನು ವೈಜ್ಞಾನಿಕವಾಗಿ ಆಲೋಚಿಸಿ ಖಾತ್ರಿ ಪಡಿಸಿಕೊಂಡ ಮೇಲೆಯೇ
ಮುಂದುವರೆಯಬೇಕು. ಬಾಹ್ಯಾಕಾಶದಲ್ಲಿ 36 ಸಾವಿರ ಕಿ.ಮೀ. ದೂರದಲ್ಲಿ ಜಿಯೋ ಸಿಂಕ್ರೊನಸ್ ಉಪಗ್ರಹ ಉಡ್ಡಯನ ಮಾಡುವ ಸಾಮರ್ಥ್ರ್ಯ ಹೊಂದಿರುವ ಪ್ರಪಂಚದ 6 ರಾಷ್ಟ್ರಗಳಲ್ಲಿ ಭಾರತ ದೇಶವೂ ಒಂದಾಗಿದ್ದು, ಎಂಸಿಎಫ್ ಮೂಲಕ ಉಪಗ್ರಹಗಳ ನಿಯಂತ್ರಣ ಮಾಡುತ್ತಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು.

ವಾಣಿಜ್ಯ ಕ್ರಾಂತಿ ಉಂಟು ಮಾಡುವುದರಲ್ಲಿ ಬಾಹ್ಯಾಕಾಶ ಹಾಗೂ ಉಪಗ್ರಹಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಇದರ ಹಿಂದಿನ ಶಕ್ತಿ ಇಸ್ರೋ ಹಾಗೂ ಉಪಗ್ರಹ ನಿಯಂತ್ರಣ ಕೇಂದ್ರ ಮುಖ್ಯವಾಗಿದೆ ಎಂದರು.

ಅಂತರಿಕ್ಷದ ಬಗ್ಗೆ ಹಿಂದಿನ ದಿನಗಳಲ್ಲಿ ಜನರಿಗೆ ಮಾಹಿತಿ ಇರಲಿಲ್ಲ. ಇಂದು ಮಾಹಿತಿ ತಂತ್ರಜ್ಞಾನದ ಹೊಸ ಆವಿಷ್ಕಾರದಿಂದ ಹೆಚ್ಚು ಮಾಹಿತಿ ಲಭ್ಯವಾಗುತ್ತಿವೆ. ಸ್ಪೇಸ್ ಆನ್ ವ್ಹೀಲ್ಸ್ ಮೊಬೈಲ್ ಮ್ಯೂಸಿಯಂ ಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಚಾರ ತಿಳಿಸುವುದರ ಜೊತೆಗೆ ಹೆಚ್ಚು ಜನರನ್ನು ಬಾಹ್ಯಾಕಾಶದತ್ತ ಸೆಳೆಯಬಹುದು ಎಂದು ಅಭಿಪ್ರಾಯಪಟ್ಟರು.

ಉಪಗ್ರಹ ನಿಯಂತ್ರಣ ಕೇಂದ್ರದ ನಿರ್ದೇಶಕ ಎಚ್.ಪ್ರೇಮಾನಂದ ಶಣ್ಯೆ ಮಾತನಾಡಿ, ಜಗತ್ತಿನಲ್ಲಿ ಮೊದಲ ಕೃತಕ ಉಪಗ್ರಹವನ್ನು 1957 ರ ಅ.4 ರಂದು ಅಂತರಿಕ್ಷಕ್ಕೆ ಉಡಾವಣೆ ಮಾಡಿದ್ದು ಯಶಸ್ವಿಯಾಯಿತು. ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ರಷ್ಯಾ ಮೂಲದ ಮಹಿಳೆ 1963 ರಲ್ಲಿ ಸಂಚರಿಸಿದರು. ಇಸ್ರೋದ ಯಶೋಗಾಥೆಯನ್ನು ಜನರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಪ್ರಯತ್ನ ಇದಾಗಿದೆ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.