ಇಲಾಖೆಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಮಾಹಿತಿಯನ್ನು ಗೋಪ್ಯವಾಗಿ ಇಡಲಾಗುವುದು. 2024ನೆೇ ಸಾಲಿನಲ್ಲಿ ಒಟ್ಟು 24 2025 ರಲ್ಲಿ ಇದುವರೆಗೆ 11 ಪ್ರಕರಣಗಳು ದಾಖಲಾಗಿವೆ.
ಪ್ರಮೋದ್ ಕುಮಾರ್ ಜೈನ್ ಡಿವೈಎಸ್‌ಪಿ
‘ಕುತಂತ್ರಕ್ಕೆ ಬಲಿಯಾಗಬೇಡಿ’
ದೇಶದ ಯುವಕರ ಶಕ್ತಿಯನ್ನು ಕುಗ್ಗಿಸಲು ನೆರೆಯ ಪಾಕಿಸ್ತಾನ ಆಫ್ಗಾನಿಸ್ತಾನ್ ಬಾಂಗ್ಲಾ ಹಾಗೂ ಇನ್ನಿತರ ರಾಷ್ಟ್ರಗಳು ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿವೆ. ಈ ಕುತಂತ್ರಕ್ಕೆ ಯುವಕರೇ ಬಲಿಯಾಗಬೇಡಿ ಎಂದು ಮಾಜಿ ಶಾಸಕ ಹಾಗೂ ಡ್ರಗ್ಸ್ ಮುಕ್ತ ಭಾರತ ಆಂದೋಲನ ಮುಖ್ಯಸ್ಥ ಎಚ್.ಎಂ. ವಿಶ್ವನಾಥ್ ಹೇಳಿದರು. ‘ಡ್ರಗ್ಸ್ ಬಳಕೆಯ ಮೇಲೆ ಎಷ್ಟು ನಿಗಾ ವಹಿಸುತ್ತೇವೆಯೋ ಅದಕ್ಕಿಂತ ಹೆಚ್ಚಾಗಿ ಡ್ರಗ್ಸ್ ಕಳ್ಳಸಾಗಣೆ ಮೇಲೆ ಹದ್ದಿನ ಕಣ್ಣು ಇಡಬೇಕಾಗಿದೆ. ಇತ್ತೀಚೆಗೆ ಅಸ್ಸಾಂನ ತೋಟದ ಕಾರ್ಮಿಕರು ಮಲೆನಾಡು ಭಾಗಕ್ಕೆ ಗಾಂಜಾ ತಂದು ಮಾರಾಟ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹೊರಗಿನಿಂದ ಬರುವವರು ಇಲ್ಲಿರುವವರು ಎಲ್ಲರ ಚಲನವಲನಗಳ ಮೇಲೆ ಪೊಲೀಸರು ಮಾತ್ರವಲ್ಲ ಜವಾಬ್ದಾರಿ ಇರುವ ಪ್ರತಿಯೊಬ್ಬ ನಾಗರಿಕನೂ ನಿಗಾ ವಹಿಸುವುದು ಅಗತ್ಯ’ ಎಂದರು.