ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಂದಲೆ: ಅಪಾರ ಬೆಳೆ ನಾಶ

Last Updated 21 ಅಕ್ಟೋಬರ್ 2020, 5:13 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಆಲೇಬೇಲೂರು ಗ್ರಾಮದಲ್ಲಿ ಕಾಡಾನೆಗಳು ಸುಮಾರು 20 ಎಕರೆಗೂ ಹೆಚ್ಚು ಪ್ರದೇಶದಲ್ಲಿನ ಭತ್ತದ ಬೆಳೆಯನ್ನು ನಾಶ ಮಾಡಿವೆ.

8 ಕಾಡಾನೆಗಳ ಗುಂಪು ಎರಡು ದಿನಗಳಿಂದ ಗ್ರಾಮದಲ್ಲಿಯೇ ಅಡ್ಡಾಡುತ್ತಾ ನಿರ್ವಾಣ ಶೆಟ್ಟಿ, ಮಂಜಮ್ಮ, ರಂಗಪ್ಪಶೆಟ್ಟಿ, ಮಂಜಪ್ಪ ಶೆಟ್ಟಿ, ಮಂಜ ಶೆಟ್ಟಿ, ವೆಂಕಟ ಶೆಟ್ಟಿ, ಸಿದ್ದ ಶೆಟ್ಟಿ, ಗೋವಿಂದ ಶೆಟ್ಟಿ, ಲಕ್ಷ್ಮಪ್ಪ ಶೆಟ್ಟಿ, ಗೋವಿಂದ ಶೆಟ್ಟಿ, ಸಿದ್ದಪ್ಪ ಶೆಟ್ಟಿ ಹಾಗೂ ಇನ್ನೂ ಹಲವು ರೈತರ ಭತ್ತದ ಬೆಳೆಯನ್ನು ತಿಂದು, ತುಳಿದು ಹಾಳು ಮಾಡಿವೆ.

ಕಾಫಿ, ಅಡಿಕೆ, ಬಾಳೆ ಗಿಡಗಳನ್ನೂ ಸಹ ತಿಂದು ತುಳಿದಿದ್ದು, ಲಕ್ಷಾಂತರ ರೂಪಾಯಿ ಬೆಳೆ ಹಾನಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT