ಶುಕ್ರವಾರ, ಅಕ್ಟೋಬರ್ 23, 2020
21 °C

ತಾಯಿಯಿಂದ ಬೇರ್ಪಟ್ಟು ಅಸ್ವಸ್ಥಗೊಂಡ ಕಾಡಾನೆ ಮರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ಸಮೀಪದ ಮಳಲಿ ಗ್ರಾಮದಲ್ಲಿ ಕಾಡಾನೆ ಮರಿಯೊಂದು ಅಸ್ವಸ್ಥಗೊಂಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ಮರಿಆನೆಗೆ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಚಪ್ಪರ ಹಾಕಿ ಆಸರೆ ನೀಡಿದ್ದಾರೆ.

‘ಮೂರು ದಿನಗಳ ಹಿಂದೆ ತಾಯಿಆನೆ ಹಾಗೂ ಆನೆ ಹಿಂಡು ಮರಿಯ ಸಮೀಪವೇ ಇದ್ದವು. ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಹಾಲು ಕುಡಿಯುವುದಕ್ಕೂ ಆನೆಮರಿಗೆ ಸಾಧ್ಯವಾಗಿಲ್ಲ. ಆನೆಗಳು ಮರಿಯನ್ನು ಬಿಟ್ಟು ಹೋಗಿವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ

‘ಆನೆಮರಿಯನ್ನು ಹುಡಿಕಿಕೊಂಡು ತಾಯಿಆನೆ ಪುನಃ ಇಲ್ಲಿಗೆ ಬರುವ ಸಾಧ್ಯತೆ ಇದೆ. ಬರದೆ ಇದ್ದರೆ ಅದನ್ನು ಆನೆಧಾಮಕ್ಕೆ ಸಾಗಿಸಿ ಆರೈಕೆ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅಗಸೆ ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು