ಮಂಗಳವಾರ, ಜನವರಿ 26, 2021
24 °C

ಆನೆಯ ದಂತ ವಶ: ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಕಲಗೂಡು: ಆನೆಯ ದಂತವನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ವಿಭಾಗದ ಪೊಲೀಸರು ಬುಧವಾರ ಬಂಧಿಸಿ, ದಂತ ಹಾಗೂ ವಾಹನವನ್ನು ವಶಪಡಿಸಿ ಕೊಂಡಿದ್ದಾರೆ.

ಕೊಡಗಿನ ಗಡಿಭಾಗದ ಸೀಗೋಡು ಗ್ರಾಮದ ಬಳಿ ಪಿಎಸ್ಐ ಸುರೇಶ್ ಮತ್ತು ಸಿಬ್ಬಂದಿ ಖಚಿತ ವರ್ತಮಾನದ ಮೇರೆ ದಂತ ಸಾಗಣೆ ಮಾಡುತ್ತಿದ್ದ ವಿರಾಜಪೇಟೆಯವರೆನ್ನಲಾದ ಜೋಷ್ ಮತ್ತು ಪ್ರಶಾಂತ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ನ್ಯಾಯಾಲಯ ಪ್ರಕರಣವನ್ನು ಅರಣ್ಯ ಇಲಾಖೆ ವಶಕ್ಕೆ ನೀಡಿದೆ. ಆರೋಪಿಗಳನ್ನು ಇಲಾಖೆ ವಶಕ್ಕೆ ಪಡೆದಿದ್ದು, ದಂತವನ್ನು ಮಡಿಕೇರಿಯಿಂದ ಮೈಸೂರಿಗೆ ಸಾಗಣೆ ಮಾಡಲಾಗುತ್ತಿದ್ದರು ಎಂಬ ಮಾಹಿತಿ ದೊರೆತಿದೆ. ಈ ಕುರಿತು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಕಲೇಶಪುರ ಎಸಿಎಫ್ ಜಿ.ಸಿ.ಲಿಂಗರಾಜ್ ಸುದ್ದಿಗಾರರಿಗೆ ತಿಳಿಸಿದರು.

ವಲಯ ಅರಣ್ಯಾಧಿಕಾರಿ ಕಾವ್ಯಶ್ರೀ, ಪೊಲೀಸ್ ಅರಣ್ಯ ವಿಭಾಗದ ಪಿಎಸ್ಐ ಸುರೇಶ್, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು