ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಯಿಂದ ರೈತರಿಗೆ ತೊಂದರೆ ಇಲ್ಲ: ಸಚಿವ ಕೆ. ಗೋಪಾಲಯ್ಯ

ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ಕಾರ್ಯಕ್ಕೆ ಸಚಿವ ಚಾಲನೆ
Last Updated 19 ಜನವರಿ 2021, 14:11 IST
ಅಕ್ಷರ ಗಾತ್ರ

ಹಾಸನ: ‘ಶ್ರೀರಾಮನ ಭಕ್ತನಾಗಿ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸಲು ಬಂದಿದ್ದೇನೆ ಹೊರತು
ಸಚಿವನಾಗಿ ಅಲ್ಲ, ಆದರ್ಶ ಪುರುಷನಿಗಾಗಿ ಈ ಸೇವೆಯಲ್ಲಿ ಪಾಲ್ಗೊಳ್ಳಲು ಖುಷಿಯಿದೆ’ ಎಂದು ಉಸ್ತುವಾರಿ
ಸಚಿವ ಕೆ. ಗೋಪಾಲಯ್ಯ ಹೇಳಿದರು.

ನಗರದ ಬೀರನಹಳ್ಳಿ ಕೆರೆ ಬಡಾವಣೆ, ಕೆ.ಆರ್. ಪುರಂ ಹಾಗೂ ಸಿದ್ದಯ್ಯ ನಗರದಲ್ಲಿ ಮಂಗಳವಾರ ಸಂಜೆ ಮನೆ
ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದರು.

‘ರಾಮ ಮಂದಿರಕ್ಕಾಗಿ ಸಾವಿರಾರು ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಹಲವಾರು ವರ್ಷಗಳ ಹೋರಾಟದ
ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಕಾನೂನಾತ್ಮಕ
ಸಮಸ್ಯೆಗಳನ್ನು ಬಗೆಹರಿಸಿ ದಾರಿ ಸುಗಮಗೊಳಿಸಿದೆ. ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ
ಹಾಗೂ ಸಾಧು ಸಂತರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ’ ಎಂದರು.

‘ಉತ್ತರ ಪ್ರದೇಶ ಸರ್ಕಾರ ಒಂದೇ ದೇವಾಸ್ಥಾನ ನಿರ್ಮಾಣ ಮಾಡುವ ಶಕ್ತಿ ಹೊಂದಿದೆ. ಆದರೆ ದೇಶದ 130
ಕೋಟಿ ಜನರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಬೇಕು ಎಂಬ ಉದ್ದೇಶದಿಂದ ಮನೆ ಮನೆಗೆ ಭೇಟಿ
ನೀಡುತ್ತಿದ್ದೇವೆ. ಇಷ್ಟೇ ಹಣ ನೀಡಬೇಕೆಂದು ಯಾರನ್ನೂ ಬಲವಂತಪಡಿಸಿಲ್ಲ’ ಎಂದು ಸ್ಪಷ್ಟ ಪಡಿಸಿದರು.

ನೂತನ ಕೃಷಿ ಕಾಯ್ದೆಯಿಂದ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕಾಂಗ್ರೆಸ್ ರಾಜಕೀಯ
ಉದ್ದೇಶದಿಂದ ಚಳವಳಿ ನಡೆಸುತ್ತಿದೆ ಎಂದರು.

ಶಾಸಕ ಪ್ರೀತಂ ಜೆ.ಗೌಡ, ಹುಡಾ ಅಧ್ಯಕ್ಷ ಲಲಾಟಮೂರ್ತಿ, ಆರ್‍ಎಸ್‍ಎಸ್ ವಿಭಾಗೀಯ ಕಾರ್ಯವಾಹ
ವಿಜಯಕುಮಾರ್ ನಾರ್ವೆ, ಪಾರಸ್‍ಮಲ್, ಎಸ್.ಕೆ. ವೇಣುಗೋಪಾಲ್, ನವೀನ್, ಕಾರ್ತಿಕ್, ವಿಜಯ್ ಹಾಗೂ
ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT