ಆಲೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಏತ ನೀರಾವರಿ ಕಾಮಗಾರಿ ಪುನಃ ಪ್ರಾರಂಭಗೊಳ್ಳುವ ನಿರೀಕ್ಷೆ ರೈತರಲ್ಲಿ ಮೂಡಿದೆ. ಶಾಸಕ ಸಿಮೆಂಟ್ ಮಂಜು ಸ್ಥಳಕ್ಕೆ ಭೇಟಿ ನೀಡಿದ್ದು, ಕಾಮಗಾರಿಯ ಸ್ಥಿತಿಗತಿ ಪರಿಶೀಲಿಸಿದರು.

ಹೇಮಾವತಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರ ಜಮೀನಿಗೆ ಗಂಜಿಗೆರೆ ಏತ ನೀರಾವರಿ ಯೋಜನೆಯಿಂದ ನೀರು ಹರಿಸುವ ಭರವಸೆ ನೀಡಲಾಗಿತ್ತು. ಈ ಯೋಜನೆ ಸಾಕಾರಗೊಳಿಸುವಂತೆ ಈ ಭಾಗದ ರೈತರು, ಜನಪ್ರತಿನಿಧಿಗಳು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದರೂ, ಇದುವರೆಗೂ ಈಡೇರಿಲ್ಲ.

ಈ ಭಾಗದ ಗ್ರಾಮಸ್ಥರು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ ಸಿಮೆಂಟ್ ಮಂಜು, ಗಂಜಿಗೆರೆ ಏತ ನೀರಾವರಿ ಯೋಜನೆಯ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಗಂಜಿಗೆರೆ ಏತ ನೀರಾವರಿ ಯೋಜನೆ ಪೂರ್ಣವಾಗಿಲ್ಲ. ನಾನು ಇಲ್ಲಿ ಬಂದು ನೋಡಿದಾಗ ಎಲೆಕ್ಟ್ರಿಕಲ್, ಪೈಪ್ಲೈನ್ ಹಾಗೂ ಆಯ್ದ ಭಾಗಗಳಲ್ಲಿ ಕಾಲುವೆ ಮುಚ್ಚಿ ಹೋಗಿವೆ ಎಂದರು.

1999 ರಲ್ಲಿ ನಿರ್ಮಾಣವಾಗಿರುವ ಗಂಜಿಗೆರೆ ಏತ ನೀರಾವರಿ ಯೋಜನೆಯಿಂದ ಅಪ್ಪಗೌಡನಹಳ್ಳಿ, ಸಿದ್ದಾಪುರ, ಗಂಜಿಗೆರೆ, ರಾಜಾಪುರ, ಬಸವನಹಳ್ಳಿ, ತಿಪ್ಪೆನಹಳ್ಳಿ, ಮಂಚೇನಹಳ್ಳಿ, ಮಂಚೇನಹಳ್ಳಿ ಕಾಲುವೆ, ಮಂದಿರ, ಗಾರಿಗಟ್ಟ ಹಳ್ಳಿಗಳ ಸುಮಾರು 900 ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ಸುತ್ತ ನೀರಾವರಿ ಪ್ರದೇಶದಿಂದ ಕೂಡಿದ್ದು, ಸಮುದ್ರಕ್ಕೆ ಉಪ್ಪಿನ ಬರ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಯೋಜನೆಯಿಂದ ನೀರು ಎತ್ತುವ ಮೋಟಾರ್ಗಳು ಚಾಲನೆಗೊಳ್ಳದೇ ತಾಂತ್ರಿಕ ದೋಷ ಉಂಟಾಗಿದೆ. ಅಧಿಕಾರಿಗಳು ಅನುದಾನದ ಕೊರತೆಯ ನೆಪ ಹೇಳದೇ ಶೀಘ್ರವಾಗಿ ಮೋಟರ್ ದುರಸ್ತಿ ಮಾಡಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.

ಬೇರೆಡೆಗೆ ನೀರು ಒದಗಿಸಲು ಈ ಭಾಗದ ರೈತರು ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಸಕಾಲಕ್ಕೆ ನೀರು ಸಿಗದೇ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ಹಾಗಾಗಿ ಇಂದು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದು, ಸ್ಥಗಿತಗೊಂಡಿರುವ ಗಂಜಿಗೆರೆ ಏತ ನೀರಾವರಿ ಯೋಜನೆಗೆ ಶೀಘ್ರ ಕಾಯಕಲ್ಪ ನೀಡಲಾಗುವುದು ಎಂದು ತಿಳಿಸಿದರು.

ಹೇಮಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಜಿತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರುದ್ರೇಗೌಡ, ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.