ಅರಕಲಗೂಡು: ಕಲೆ ಮತ್ತು ಸಂಸ್ಕೃತಿಗೆ ಹಾಸನ ಜಿಲ್ಲೆ ತನ್ನದೇ ಅದ ವಿಶಿಷ್ಟ ಕೊಡುಗೆಯನ್ನು ನೀಡಿದ್ದು, ತಾಲ್ಲೂಕಿನಲ್ಲಿ ಸಾಕಷ್ಟು ವಿಭಿನ್ನ ಕಲಾವಿದರು ಇರುವುದು ಹೆಮ್ಮೆಯ ಸಂಗತಿ ಎಂದು ನಿವೃತ್ತ ಎಸ್ಐ ಹಾಗೂ ರಂಗ ಕಲಾವಿದ ಎಚ್.ಜೆ. ನಾಗರಾಜು ತಿಳಿಸಿದರು.

ದೊಡ್ಡಮ್ಮದೇವಿ ಕಲಾ ಮತ್ತು ಸಾಂಸ್ಕೃತಿಕ ಸಂಘವು ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ರಂಗಗೀತೆಗಳ ಗಾಯನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೇವಾರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ತಾಲ್ಲೂಕಿನ ಕಲಾವಿದರು ಒಟ್ಟಾಗಿ ಸೇರಿ ಕಲಾ ಸಂಘ ಸ್ಥಾಪಿಸಿ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆ ನಡೆಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ, ಸಂಘದ ಕಾರ್ಯಚಟುವಟಿಕೆಗಳಲ್ಲಿ ತಾವೂ ಸಹ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿ ಹೇಳಿದರು.

ಸಂಘದ ಕಾರ್ಯದರ್ಶಿ ಜಿ.ಜಿ. ಕೇಶವ ಪ್ರಸ್ತಾವಿಕವಾಗಿ ಮಾತನಾಡಿ, ಕಳೆದ 8 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘ ಪ್ರತಿ ವರ್ಷ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ. ಸಂಘದ ಸದಸ್ಯರು ಜಿಲ್ಲಾ ಮತ್ತು ರಾಜ್ಯ ಮಟ್ಟದ ನಾಟಕ ಸ್ಫರ್ಧೆಗಳಲ್ಲಿ ಪ್ರದರ್ಶನ ನೀಡಿ ಪ್ರಶಂಸೆ ಪಡೆದಿರುತ್ತಾರೆ. ಪ್ರತಿ ವರ್ಷ ಸಂಘವು 10 ದಿನಗಳ ಪೌರಾಣಿಕ ಹಗಲು ನಾಟಕೋತ್ಸವ ಕಾರ್ಯಕ್ರಮ ಆಯೋಜಿಸಿ ರಾಜ್ಯದ ಪ್ರತಿಷ್ಠಿತ ಕಲಾ ತಂಡಗಳು ಪ್ರದರ್ಶನ ನೀಡಲು ಅನುವು ಮಾಡಿಕೊಟ್ಟಿದೆ, ರಂಗಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಎಸ್.ಎಸ್. ಪುಟ್ಟೇಗೌಡ, ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ವಿ.ಎ. ನಂಜುಂಡಸ್ವಾಮಿ, ಸಂಘದ ಗೌರವ ಅಧ್ಯಕ್ಷ ರಮೇಶ್ ಭಾಗವತ್, ಸಂಘದ ಅಧ್ಯಕ್ಷ ಸತೀಶ್ ಗೌಡ, ಉದ್ಯಮಿಗಳಾದ ಗೋವಿಂದರಾಜು, ಹೊಸಕೊಪ್ಪಲು ರಾಜೇಗೌಡ, ಶಿಕ್ಷಕ ಪಿ. ನಂದಕುಮಾರ್, ಬಿ.ಎಸ್. ರವಿ ಮಾತನಾಡಿದರು. ವಿಶ್ವಕರ್ಮ ಸಂಘದ ಕಾರ್ಯದರ್ಶಿ ಪ್ರವೀಣ್, ವಕೀಲ ಜಿ.ಜಿ. ರವಿ, ರಂಗನಿರ್ದೇಶಕರಾದ ಸಿ.ಇ. ಕುಬೇರಯ್ಯ, ಸಿ.ಆರ್. ಸ್ವಾಮಿ, ಡಿ. ಬಿ.ಬಸವರಾಜು ರವಿ ಕಲಾ ಸಂಘದ ಅಧ್ಯಕ್ಷ ವೆಂಕಟೇಶ್, ಅಂಬೇಡ್ಕರ್ ಕಲಾ ಸಂಘದ ಉಪಾಧ್ಯಕ್ಷ ರಂಗಸ್ವಾಮಿ ಉಪಸ್ಥಿತರಿದ್ದರು. ರಂಗಭೂಮಿ ಕಲಾವಿದರು ರಂಗಗೀತೆಗಳ ಗಾಯನ ನಡೆಸಿದರು. ನಿವೃತ್ತ ಎಸ್ಐ ಹಾಗೂ ರಂಗಭೂಮಿ ಕಲಾವಿದ ಎಚ್.ಜೆ. ನಾಗರಾಜು, ಶಿಕ್ಷಕ ನಂದಕುಮಾರ್ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.