ಹಿರೀಸಾವೆ: ಹೋಬಳಿಯಲ್ಲಿ ಭಾನುವಾರ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 30 ಕರುಗಳನ್ನು ರಕ್ಷಣೆ ಮಾಡಲಾಗಿದೆ.

ಗ್ರಾಮದ ಅವಿನಾಶ್ ಮತ್ತು ಕುಮಾರಸ್ವಾಮಿ ಬೆಳಿಗ್ಗೆ 5 ಗಂಟೆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕದಬಳ್ಳಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ, ಸ್ಕಾರ್ಪಿಯೋ ಕಾರ್ನಲ್ಲಿ ಕರುಗಳು ಕಿರುಚುವ ಶಬ್ದ ಕೇಳಿದೆ. ಮೇಟಿಕೆರೆ ಗೇಟ್ ಬಳಿ ಕಾರನ್ನು ತಡೆದಿದ್ದಾರೆ. ಚಾಲಕ ವಾಹನವನ್ನು ನಿಲ್ಲಿಸಿ, ಓಡಿಹೋಗಿದ್ದಾನೆ.

30 ಕರುಗಳನ್ನು ಒಂದರ ಮೇಲೊಂದರಂತೆ ತುಂಬಿರುವುದು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಕರುಗಳನ್ನು ರಕ್ಷಣೆ ಮಾಡಿ ಅವುಗಳನ್ನು ಅರಸೀಕೆರೆ ಗೋ ಶಾಲೆಗೆ ಬಿಡಲಾಗಿದೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.