ಹಾಸನ: ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ

ಆಲೂರು: ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಪಟ್ಟಣದ ನಿವಾಸಿ ಯೋಗೇಶ್ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
‘ಮದ್ಯವ್ಯಸನಿಯಾಗಿರುವ ನಾನು, ದಿನಕ್ಕೆ ನಾಲ್ಕು ಕ್ವಾರ್ಟರ್ ಕುಡಿಯುತ್ತಿದ್ದೆ. ಆರೋಗ್ಯ ಹದಗೆಟ್ಟು, ಮನೆಯಲ್ಲಿ ನಿತ್ಯ ಜಗಳವಾಡುತ್ತಿದೆ. ನೆಮ್ಮದಿಯೇ ಅಳಿಸಿ ಹೋಗಿತ್ತು. ಹೊತ್ತಿನ ಊಟ ಮಾಡಲು ಆಗುತ್ತಿರಲಿಲ್ಲ. ದುಡಿದ ಹಣದಲ್ಲಿ ಶೇ 90 ಕುಡಿಯಲು ಬಳಸುತ್ತಿದ್ದೆ. ಸಂಸಾರವೇ ಹಾಳಾಗಿತ್ತು. ಕೊರೊನಾ ಲಾಕ್ಡೌನ್ನಿಂದ ಸರ್ಕಾರ ಮದ್ಯ ಮಾರಾಟ ನಿಷೇಧಿಸಿದೆ. ಆರಂಭದಲ್ಲಿ ಮದ್ಯ ಸಿಗದೆ ಹುಚ್ಚು ಹಿಡಿದಂತೆ ಆಗುತ್ತಿತ್ತು. ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಮರ ಪಾಲಿಷ್ ವೃತ್ತಿ ಮಾಡಿಕೊಂಡು ದಿನ ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನು ವಾರಕ್ಕೆರಡು ಬಾರಿ ಕೊಂಡೊಯ್ಯುತ್ತಿದ್ದೇನೆ. ಮನೆಯಲ್ಲಿ ಮಕ್ಕಳು, ಪತ್ನಿ ಜತೆ ನೆಮ್ಮದಿ ಸಂಸಾರ ನಡೆಸುತ್ತಿದ್ದೇನೆ. ಆರೋಗ್ಯವೂ ಸುಧಾರಿಸಿದೆ. ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಸುದ್ದಿ ಕೇಳಿ ನೋವಾಯಿತು. ಮತ್ತೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಮತ್ತೆ ಕುಟುಂಬಗಳನ್ನು ನರಕಕ್ಕೆ ತಳ್ಳಬೇಡಿ’ ಎಂದು ಮನವಿ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.