ಹಾಸನ: ಕಡಿಮೆ ದರದಲ್ಲಿ ಔಷಧಿ ಒದಗಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಜಿಲ್ಲೆಯಲ್ಲೂ ವ್ಯಾಪಕ ಮನ್ನಣೆ ಗಳಿಸಿದೆ.

ಜಿಲ್ಲೆಯಲ್ಲಿ ಸುಮಾರು 29 ಜನೌಷಧಿ ಕೇಂದ್ರ ತೆರೆಯಲಾಗಿದ್ದು, ಹಾಸನ ನಗರದಲ್ಲಿಯೇ ಅತಿ ಹೆಚ್ಚು 10 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 24 ಅಂಗಡಿಗಳು ಸಾರ್ವಜನಿಕ ಸ್ಥಳಗಳಲ್ಲಿ ತೆರೆದಿದ್ದರೆ, ಐದು ಔಷಧಿ ಅಂಗಡಿಗಳು ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ತೆರೆಯಲಾಗಿದೆ ಎಂದು ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ ಹರೀಶ್ ತಿಳಿಸಿದರು.

ಆಲೂರು ತಾಲ್ಲೂಕಿನಲ್ಲಿ 1, ಅರಕಲಗೂಡು 2, ಅರಸೀಕೆರೆ 4, ಬೇಲೂರು 1, ಚನ್ನರಾಯಪಟ್ಟಣ 3, ಹೊಳೆನರಸೀಪುರ 1, ಸಕಲೇಶಪುರದಲ್ಲಿ 2 ಜನೌಷಧಿ ಮಳಿಗೆ ತೆರೆಯಲಾಗಿದೆ.

ಈ ಕೇಂದ್ರಗಳಲ್ಲಿ ಮಧುಮೇಹ, ರಕ್ತದೊತ್ತಡ, ಹೃದಯ ಸಮಸ್ಯೆ ಸೇರಿದಂತೆ ಪ್ರಮುಖ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳು ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ನೆರವಾಗುತ್ತಿದ್ದು, ಮತ್ತಷ್ಟು ಅಂಗಡಿಗಳನ್ನು ತೆರೆದರೆ ಅನುಕೂಲ ಎಂದು ಸಾರ್ವಜನಿಕರು ಹೇಳುತ್ತಾರೆ.

ಸಾಮಾನ್ಯವಾಗಿ ಖಾಸಗಿ ಔಷಧಿ ಅಂಗಡಿಗಳಲ್ಲಿ ಹೃದಯ ಕಾಯಿಲೆ ಸಂಬಂಧಿಸಿದ ತಿಂಗಳಿನ ಔಷಧಿಗಳಿಗೆ ₹ 2ಸಾವಿರ ವೆಚ್ಚವಾದರೆ, ಜನೌಷಧಿ ಕೇಂದ್ರದಲ್ಲಿ ₹ 500 ರಿಂದ ₹ 600ಕ್ಕೆ ಎಲ್ಲ ಔಷಧಿಗಳು ಲಭ್ಯವಾಗುತ್ತಿವೆ.

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ ನಗರ ಪಟ್ಟಣಗಳಲ್ಲಿ ಜನೌಷಧಿ ಕೇಂದ್ರಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಇನ್ನುಳಿದ ಪ್ರದೇಶಗಳಲ್ಲಿ ಕೇಂದ್ರಗಳ ನಡುವೆ ಒಂದು ಕಿ.ಮೀ. ಅಂತರ ಇರಬೇಕು ಎನ್ನುವ ನಿಯಮ ವಿಧಿಸಲಾಗಿದೆ.

ಜನರಿಕ್ ಔಷಧಿಗಳನ್ನು ಒದಗಿಸಲು ಈ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಿದೆ. ಗುಣಮಟ್ಟ ಮತ್ತು ಪರಿಣಾಮಕಾರಿ ಎರಡರಲ್ಲೂ ಹೆಚ್ಚು ದುಬಾರಿ ಬ್ರಾಂಡ್ ಔಷಧಿಗಳಿಗೆ ಸಮ ಎನ್ನುತ್ತಾರೆ ಅಂಗಡಿಗಳ ಮಾಲೀಕರು.

ನಗರದ ಕೆ.ಆರ್.ಪುರಂನಲ್ಲಿ ಜನೌಷಧಿ ಕೇಂದ್ರ ತೆರೆದು ನಾಲ್ಕು ತಿಂಗಳಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೇಂದ್ರದ ಮಾಲೀಕ ನಿತಿನ್ ಜಿ. ತಿಳಿಸಿದರು.

ಹೃದಯ ಕಾಯಿಲೆ ಸಂಬಂಧ ಹಲವು ತಿಂಗಳಿನಿಂದ ಔಷಧಿ ಖರೀದಿ ಮಾಡುತ್ತಿದ್ದು ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಇದರಿಂದ ಹೆಚ್ಚು ಅನುಕೂಲವಾಗಿದೆ
ಸಣ್ಣಮ್ಮ ಬಾಗೂರಿನ ಮಹಿಳೆ

ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ 3 ಜನರಿಕ್ ಔಷಧ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಔಷಧ ದೊರೆಯುತ್ತಿದ್ದು ರೋಗಿಗಳಿಗೆ ಅನುಕೂಲ ಕಲ್ಪಿಸಲಾಗಿದೆ
ಡಾ.ನಾಗಪ್ಪ ಜಿಲ್ಲಾ ಶಸ್ತ್ರಚಿಕಿತ್ಸಕ

2439 ಔಷಧಿ ಲಭ್ಯ ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್ ಆಫ್ ಇಂಡಿಯಾ (ಬಿಪಿಪಿಐ) ಅನ್ನು ಭಾರತ ಸರ್ಕಾರದ ಔಷಧಿ ಇಲಾಖೆ ಅಡಿಯಲ್ಲಿ ಸ್ಥಾಪಿಸಲಾಗಿದೆ. 2016ರಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಎಂದು ಮರು ನಾಮಕರಣ ಮಾಡಲಾಗಿದೆ. 2439 ವಿವಿಧ ಜನರಿಕ್ ಔಷಧಿ ಮತ್ತು ಇತರೆ ಔಷಧಿಗಳ ದರವನ್ನು https://janaushadhi.gov.in/productportfolio/ProductmrpList ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.