ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ ನಗರಸಭೆ | ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ ಬಿಗಿಪಟ್ಟು: ಬಿಜೆಪಿಗೆ ಇಕ್ಕಟ್ಟು

Published : 21 ಆಗಸ್ಟ್ 2024, 6:30 IST
Last Updated : 21 ಆಗಸ್ಟ್ 2024, 6:30 IST
ಫಾಲೋ ಮಾಡಿ
Comments

ಹಾಸನ: ಇಲ್ಲಿನ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಲಿದೆ. ಜೆಡಿಎಸ್‌–ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ಹಂಚಿಕೆ ಆಗಬೇಕು ಎನ್ನುವ ಕೂಗಿನ ಮಧ್ಯೆ, ಅಧ್ಯಕ್ಷ ಸ್ಥಾನವನ್ನು ನಮಗೇ ನೀಡುವಂತೆ ಜೆಡಿಎಸ್‌ ಬಿಗಿಪಟ್ಟು ಹಿಡಿದಿದ್ದು, ಬಿಜೆಪಿಗೆ ಇಕ್ಕಟ್ಟು ಎದುರಾಗಿದೆ.

ನಗರಸಭೆ 35 ಸದಸ್ಯರ ಪೈಕಿ ಜೆಡಿಎಸ್‌ 17, ಬಿಜೆಪಿ 14, ಪಕ್ಷೇತರ ಹಾಗೂ ಕಾಂಗ್ರೆಸ್‌ನ ತಲಾ ಇಬ್ಬರು ಸದಸ್ಯರಿದ್ದಾರೆ. ಬಿಜೆಪಿ ಇಬ್ಬರು ಸದಸ್ಯರು ಜೆಡಿಎಸ್‌ ಜೊತೆಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಪಕ್ಷೇತರರೂ ಜೆಡಿಎಸ್‌ಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನ ಬೆಂಬಲ ಅಧಿಕವಾಗಿದ್ದು, ಬಿಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಈಗಾಗಲೇ ನೀಡಲಾಗಿದೆ ಎಂದು ಜೆಡಿಎಸ್‌ನ ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌. ಲಿಂಗೇಶ್‌, ಶಾಸಕ ಸ್ವರೂಪ್‌ ಪ್ರಕಾಶ್‌ ಹಾಗೂ ಶಾಸಕ ಎಚ್.ಡಿ. ರೇವಣ್ಣ ಅವರು, ಜೆಡಿಎಸ್‌ನ ಎಲ್ಲ 17 ಸದಸ್ಯರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎನ್ನುವ ಕುರಿತೂ ಸಮಾಲೋಚನೆ ಮಾಡಿದ್ದಾರೆ.

‘ಬಹುಮತ ಇಲ್ಲದೇ ಇದ್ದರೂ ಮೀಸಲಾತಿಯಿಂದಾಗಿ ಕಳೆದ ಬಾರಿ ಬಿಜೆಪಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿತ್ತು. ಕಳೆದ ಬಾರಿ ಅಧಿಕಾರ ನಡೆಸಿದ್ದಾರೆ. ಈ ಬಾರಿ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳನ್ನು ಜೆಡಿಎಸ್‌ಗೆ ಇಟ್ಟುಕೊಳ್ಳಲೇಬೇಕು. ಮೈತ್ರಿಯ ನೆಪದಲ್ಲಿ ಬಹುಮತವಿದ್ದರೂ ಅಧಿಕಾರ ಬಿಟ್ಟುಕೊಡುವುದು ಸರಿಯಲ್ಲ’ ಎನ್ನುವ ಅಭಿಪ್ರಾಯವನ್ನು ಜೆಡಿಎಸ್‌ ಸದಸ್ಯರು, ಮುಖಂಡರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಮೈತ್ರಿ ಮುಂದುವರಿಯಲಿದೆ ಎನ್ನುವ ಮೂಲಕ ಬಹುಮತ ಇಲ್ಲದಿದ್ದರೂ ಅಧಿಕಾರ ಪಡೆಯಬೇಕು ಎನ್ನುವ ಇರಾದೆ ಬಿಜೆಪಿ ಮುಖಂಡರದ್ದಾಗಿದೆ. ಇದಕ್ಕೆ ವರಿಷ್ಠರು ಸ್ಪಷ್ಟ ಸಂದೇಶ ನೀಡಬೇಕು. ಯಾವುದೇ ಕಾರಣಕ್ಕೂ ಈ ಬಾರಿ ಬಿಜೆಪಿಗೆ ಅಧಿಕಾರ ನೀಡುವುದು ಬೇಡ. ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಇಟ್ಟುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.  

ಉಪಾಧ್ಯಕ್ಷ ಸ್ಥಾನದ ಮೇಲೆ ಬಿಜೆಪಿ ಕಣ್ಣು: ನಗರಸಭೆಯಲ್ಲಿ ಮೈತ್ರಿ ಕುರಿತು ಈಗಾಗಲೇ ಮಾತುಕತೆಗಳು ನಡೆದಿವೆ. ಯಾರು ಮೊದಲು ಅಧಿಕಾರ ಪಡೆಯಬೇಕು ಎನ್ನುವುದಷ್ಟೇ ಬಾಕಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT