ಮರೆಯಲಾಗದ ಕಾರ್ಯಾಗಾರ
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಅವರನ್ನು ಹತ್ತಿರದಿಂದ ನೋಡಿದ್ದಲ್ಲದೆ, ಅವರ ಮಾತನ್ನು ಕೇಳುವ ಅವಕಾಶ ದೊರಕಿತು ಎಂದು ಪ್ರೀತಮ್ ತಿಳಿಸಿದರು. ಇಸ್ರೊ ವಿಜ್ಞಾನಿಗಳಾದ ಸತೀಶ್ ಆರ್ಯಭಟ, ಲಕ್ಷ್ಮಿಪತಿ ಅವರಿಂದ ಟೆಲಿಸ್ಕೋಪ್ ತಯಾರಿಸುವ ಮಾಹಿತಿ ಪಡೆದಿದ್ದು, ಸಾಧಿಸಬೇಕೆಂಬ ಆಸೆ ಕವಲೊಡೆಯಿತು. ಟೆಲಿಸ್ಕೋಪ್‌ನಿಂದ ಬಾಹ್ಯಾಕಾಶ ಹಾಗೂ ಗ್ರಹಗಳ ವೀಕ್ಷಣೆ ಮಾಡಬಹುದು. ಪ್ರಾಯೋಗಿಕವಾಗಿ ಕಲಿಯಲು ಅವಕಾಶವಿದೆ ಎಂಬ ಮಾಹಿತಿ ದೊರಕಿತು. ಅರ್ಥಪೂರ್ಣ ಹಾಗೂ ಕಲಿಕೆಯ ದಾಹ ಹೆಚ್ಚಿಸಿದ ಕಾರ್ಯಾಗಾರ ಮರೆಯುವಂತಿಲ್ಲ ಎಂದು ಹೇಳಿದರು.