ಚನ್ನರಾಯಪಟ್ಟಣ: ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಹಿಳಾ ಕಲಾವಿದರು ಅಭಿನಯಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕ ನೋಡುಗರ ಮೆಚ್ಚುಗೆ ಗಳಿಸಿತು.

ಚಾಮುಂಡೇಶ್ವರಿ ಮತ್ತು ಕನ್ನಡಾಂಬೆ ಮಹಿಳಾ ಕಲಾತಂಡದ 23 ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದರು. ಭಾನುವಾರ ಮಧ್ಯಾಹ್ನ ಆರಂಭವಾದ ನಾಟಕದಲ್ಲಿ ಕೆಲ ಮಹಿಳಾ ಕಲಾವಿದರ ಲಯಬದ್ದ ಹಾಡು ಮತ್ತು ಅಭಿನಯ ಮೆಚ್ಚಿದ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆಯ ಮೂಲಕ ಪ್ರೋತ್ಸಾಹಿಸಿದರು.

ಸಂಜೆಯಾಗುತ್ತಿದ್ದಂತೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಯಿತು. ಸಾಕಷ್ಟು ಮಂದಿ ನಿಂತುಕೊಂಡು ನಾಟಕ ವೀಕ್ಷಿಸಿದರು. ಶಾಮಿಯಾನದ ಹೊರಭಾಗದಲ್ಲಿ ಪರದೆ ಅಳವಡಿಸಿ ನಾಟಕ ಪ್ರಸಾರ ಮಾಡಲಾಯಿತು.

ರಂಗಸ್ವಾಮಿಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬಂದ ನಾಟಕದಲ್ಲಿ ಕಲಾವಿದರಾದ ಶಶಿಕಲಾ, ಜೆ.ಎನ್.ಯಶಸ್ವಿನಿ, ಮಮತಾ, ಕುಶಲಮತಿ, ಭುವನೇಶ್ವರಿ, ಹೇಮಾವತಿ, ಪುಷ್ಪಾ, ಪ್ರಿಯಾಂಕಾ, ಧನಲಕ್ಷ್ಮಿ, ಕಾವ್ಯಾ, ರಾಧಾ,ವೀಣಾ, ರಾಧಾ, ವಸಂತಾ, ರಾಣಿ, ಎನ್.ಬಿ. ದಾಕ್ಷಾಯಿಣಿ, ಶಾಂತಾ, ಪ್ರಿಯಾ ಹಾಗೂ ಬಾಲಕಾಲವಿದರಾದ ಲೇಕ್ಷಣಾ, ಶಾರ್ವಿ, ತಾಸ್ಸಿ, ತ್ರಿಶಾ, ಕೀರ್ತಿ ಅಭಿನಯಿಸಿದ್ದರು.ಚನ್ನಗಿರೀಶ್, ಮೋಹನ್ ಕುಮಾರ್, ಜಗದೀಶ್ ಪಕ್ಕವಾದ್ಯ ನುಡಿಸಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ‘ಕಲೆ ಸಾಧಕನ ಸ್ವತ್ತು. ಮಹಿಳೆಯರಿಗೆ ಸಾಕಷ್ಟು ಕೆಲಸಗಳಿರುತ್ತದೆ. ಬಿಡುವು ಮಾಡಿಕೊಂಡು ನಾಟಕ ಕಲಿತು ಅಭಿನಯಿಸಿದ್ದಾರೆ’ ಎಂದು ಶ್ಳಾಘಿಸಿದರು.

ಸಂಸದ ಶ್ರೇಯಸ್ ಎಂ.ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಕಾಂಗ್ರೆಸ್ ಮುಖಂಡ ಎ.ಸಿ.ಆನಂದ ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅದ್ಯಕ್ಷ ಎಚ್.ಎನ್.ಲೋಕೇಶ್ ಮಾತನಾಡಿದರು.

ಸ್ಥಳೀಯ ಯೋಜನಾ ಪ್ರಾಧಿಕಾರದ ಅದ್ಯಕ್ಷ ಜಿ.ಆರ್.ಮೂರ್ತಿ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಎನ್.ಮಂಜುನಾಥ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅದ್ಯಕ್ಷ ಎಲ್.ಪಿ.ಪ್ರಕಾಶ್ಗೌಡ, ಮುಖಂಡರಾದ ಎಂ.ಎ.ರಂಗಸ್ವಾಮಿ, ಎಚ್.ಎನ್.ಲವಣ್ಣ ಭಾಗವಹಿಸಿದ್ದರು.

ನಾಟಕಕ್ಕೆ ಸೀನರಿ ಸೌಲಭ್ಯ ಭರವಸೆ

ನಾಟಕ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ಮಾತನಾಡಿ ‘ತಾಲ್ಲೂಕಿನಲ್ಲಿ ಹೆಚ್ಚು ಕಲಾವಿದರಿದ್ದಾರೆ. ಕಳೆದ ಮಾರ್ಚ್ನಲ್ಲಿ ಮಹಿಳಾ ತಂಡದವರು ನಾಟಕ ಅಭಿನಯಿಸಿದ್ದರು. ಈಗ ಚಾಮುಂಡೇಶ್ವರಿ ಕನ್ನಡಾಂಬೆ ತಂಡದ ಕಲಾವಿದರು ಕುರುಕ್ಷೇತ್ರ ನಾಟಕ ಅಭಿನಯಿಸಿದ್ದಾರೆ. ಈ ದಿನದ ನಾಟಕಕ್ಕೆ ಸೀನರಿ ಸೌಲಭ್ಯ ಒದಗಿಸಿದ್ದೇನೆ. ಇನ್ನೂ ಮುಂದೆ ತಾಲ್ಲೂಕಿನಲ್ಲಿ ಮಹಿಳಾ ಕಲಾವಿದರು ಅಭಿನಯಿಸುವ ನಾಟಕಕ್ಕೆ ಸೀನರಿ ಸೌಲಭ್ಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.