ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಕಾರ ಪಡೆಯಲು ಮಠ ಸಹಕಾರಿ’

ಕಾರ್ಜುವಳ್ಳಿ: ಶಂಭುಲಿಂಗ ಸ್ವಾಮೀಜಿ ಶಿವಗಣಾರಾಧನೆ, ನೂತನ ಶ್ರೀಗಳ ಪಟ್ಟಾಧಿಕಾರ
Last Updated 18 ಡಿಸೆಂಬರ್ 2020, 2:20 IST
ಅಕ್ಷರ ಗಾತ್ರ

ಆಲೂರು: ‘ವ್ಯಕ್ತಿಗಳ ಮನೋಭಾವನೆ ಬದಲಾದರೂ ಧರ್ಮ, ಭಾವನೆ, ಸಿದ್ಧಾಂತಗಳು ಬದಲಾಗುವುದಿಲ್ಲ’ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠಾಧ್ಯಕ್ಷರಾದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಕಾರ್ಜುವಳ್ಳಿ ಗ್ರಾಮದಲ್ಲಿ ಗುರುವಾರ ಶ್ರೀ ರಂಭಾಪುರಿ ಶಾಖಾಮಠದ ಆವರಣದಲ್ಲಿ, ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಶಿವಗಣಾರಾಧನೆ ಮತ್ತು ನೂತನ ಶ್ರೀಗಳ ಪಟ್ಟಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ‘ವೀರಶೈವ ಪರಂಪರೆ ಅನಾದಿ ಕಾಲದಿಂದ ಉಳಿದು ಬೆಳೆದು ಬರಲು ಪೀಠ, ಮಠದ ಕೊಡುಗೆ ಅಪಾರವಾಗಿದೆ. ಮಠಗಳು ಭಕ್ರರಲ್ಲಿ ಉತ್ತಮ ಸಂಸ್ಕಾರ ಪಡೆಯಲು ಸಹಕಾರಿಯಾಗಿವೆ. ಭಕ್ತರು ಸಂಸ್ಕಾರವಂತರಾಗಿ ಸಂಸ್ಕೃತಿ ಪಾಲನೆಯೊಂದಿಗೆ ಕರ್ತವ್ಯ ಅರಿತು ಬಾಳಿದರೆ ಶ್ರೇಯೋಭಿವೃದ್ಧಿಯಾಗುತ್ತದೆ’ ಎಂದರು.

ನೂತನ ಪೀಠಾಧಿಕಾರಿ ಪಟ್ಟಾಧಿಕಾರ ವಹಿಸಿಕೊಂಡ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರ ಸಲಹೆಗಳನ್ನು ಸದಾ ಪಡೆದು ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಕಾರ್ಜುವಳ್ಳಿ ಗ್ರಾಮದಲ್ಲಿ ನೆಲೆಸಿರುವ ವೀರಭದ್ರಸ್ವಾಮಿ, ಚೌಡೇಶ್ವರಿ ದೇವಿ ಮಠ ನೆಲೆಸಲು ಸಾಕ್ಷಿಯಾಗಿವೆ. ಭಕ್ತರು ಮಠಕ್ಕೆ ತಮ್ಮ ವಾರ್ಷಿಕ ಆದಾಯದಲ್ಲಿ ಅಲ್ಪ ಕೊಡುಗೆ ನೀಡಿದರೆ ಮುಂದಿನ ಐದು ವರ್ಷಗಳಲ್ಲಿ ಕಾರ್ಜುವಳ್ಳಿ ಮಠ ಸಾಕಷ್ಟು ಅಭಿವೃದ್ಧಿಯಾಗಲಿದೆ. ಮಠ ಅಭಿವೃದ್ಧಿಗೆ ಮಾಜಿ ಶಾಸಕ ಬಿ.ಆರ್. ಗುರುದೇವ್, ಅಧ್ಯಕ್ಷ ಎಂ.ಎಸ್. ಪರಮಶಿವಪ್ಪ, ಬಿ.ಪಿ. ಐಸಾಮಿಗೌಡ ಅವರ ಪರಿಶ್ರಮ ಸ್ಮರಣೀಯ. 2020 ಅತ್ಯಂತ ಅನಿಷ್ಠ ವರ್ಷವಾಗಿ ಪರಿಣಮಿಸಿ, ಜೀವನದಲ್ಲಿ ಮರೆಯಲಾರದಂತಹ ನೋವನ್ನು ನೋಡಿ ಅನುಭವಿಸುವಂತಾಯಿತು ಎಂದರು.

ಸಮಾರಂಭದಲ್ಲಿ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಚನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಸದಾಶಿವ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಧರ್ಮರಾಜೇಂದ್ರ ಸ್ವಾಮೀಜಿ, ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಎಂ.ಎಸ್.ಪರಮಶಿವಪ್ಪ, ಬಿ.ಆರ್. ಗುರುದೇವ್, ಬಿ.ರೇಣುಕಪ್ರಸಾದ್, ಬಿ.ಪಿ. ಧರಣೇಂದ್ರ, ಎಚ್.ಎನ್.ದೇವರಾಜು ಹಾಗೂ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT