ಹಾಸನ: ರಾಜ್ಯ ಸರ್ಕಾರ ಸಿದ್ದಪಡಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕುದೇವಾಲಯಗಳು ಸೇರಿವೆ. ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ಬರುವವರೆಗೂ ಕಾದು ನೋಡಲುಜಿಲ್ಲಾಡಳಿತ ಮುಂದಾಗಿದೆ.

ಅರಸೀಕೆರೆ ತಾಲ್ಲೂಕಿನ ಬೊಮ್ಮೇನಹಳ್ಳಿಯ ಪ್ಲೇಗಿನಮ್ಮ ಮತ್ತು ಕಾರೇಹಳ್ಳಿಯ ಮಾರ್ಗದಮ್ಮ ದೇವಸ್ಥಾನ,ಚನ್ನರಾಯಪಟ್ಟಣ–ಶ್ರವಣಬೆಳಗೊಳ ನಡುವಿನ ಜನಿವಾರ ಕೆರೆ ಏರಿ ಮೇಲಿರುವ ಏರಿ ಮಾರಮ್ಮ ಮತ್ತುಹಾಸನ ತಾಲ್ಲೂಕಿನ ಶಾಂತಿಗ್ರಾಮ–ಹೊಂಗೆರೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಗಳುಜಿಲ್ಲೆಯ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿವೆ.

ಸಾರ್ವಜನಿಕ ರಸ್ತೆಯ 100 ಮೀಟರ್ ವ್ಯಾಪ್ತಿಯಲ್ಲಿರುವ ಹಾಗೂ ರಸ್ತೆ ಮಧ್ಯದಲ್ಲಿರುವ ಧಾರ್ಮಿಕಕಟ್ಟಡಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್ 2006ರಲ್ಲಿಯೇ ಆದೇಶಿಸಿತ್ತು. ಈ ಕಾರ್ಯಪೂರ್ಣಗೊಳಿಸಲು 2009ರ ಸೆ.9ರ ವರೆಗೂ ಗಡುವು ನೀಡಲಾಗಿತ್ತು. ಆ ಸಂಬಂಧ ಮೊದಲು ಸಿದ್ದಗೊಂಡಪಟ್ಟಿಯಲ್ಲಿ ಜಿಲ್ಲೆಯಲ್ಲಿ ತೆರವುಗೊಳಿಸಬೇಕಾದ 97 ಧಾರ್ಮಿಕ ಕಟ್ಟಡಗಳನ್ನು ಗುರುತಿಸಲಾಗಿತ್ತು. ಕೋರ್ಟ್ಗಡುವಿನ ಒಳಗೆ 75 ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು.

2009ರ ಗಡುವು ಮುಗಿದ ನಂತರವೂ ಬಾಕಿ ಉಳಿದಿದ್ದ 22 ಧಾರ್ಮಿಕ ಕಟ್ಟಡಗಳ ಪೈಕಿ ಇಪ್ಪತ್ತನ್ನುನಂತರ ದಿನಗಳಲ್ಲಿ ತೆರವುಗೊಳಿಸಲಾಗಿತ್ತು. ಈ ನಡುವೆ ಕೋರ್ಟ್ ಆದೇಶ ಪಾಲನೆ ಹಾಗೂ ಅಕ್ರಮನಿರ್ಮಾಣಗಳ ತೆರವು ಸಂಬಂಧ ಕ್ರಮ ಕೈಗೊಂಡಿರುವ ಬಗ್ಗೆ 2019 ಹಾಗೂ 2020ರಲ್ಲಿ ಹೈಕೋರ್ಟ್ರಾಜ್ಯ ಸರ್ಕಾರದಿಂದ ವರದಿ ಕೇಳಿತ್ತು.

ತೆರವಾಗದೆ ಉಳಿದಿರುವ ಎರಡು ದೇವಾಲಯಗಳ ಜತೆಗೆ ಇತ್ತೀಚೆಗೆ ನಿರ್ಮಾಣಗೊಂಡಿರುವ ಇನ್ನೇರಡುದೇವಾಲಯಗಳು ಸೇರ್ಪಡೆಯಾಗಿವೆ. ಅವುಗಳನ್ನು ತೆರವು ಮಾಡುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಜುಲೈ 1ರಂದು ನಿರ್ದೇಶನ ನೀಡಿದ್ದರು. ಅಲ್ಲದೆ, ಅನಧಿಕೃತ ಕಟ್ಟಡ ತೆರವಿಗೆಕೈಗೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದರು.

ಜಿಲ್ಲೆಯಲ್ಲಿ ನಾಲ್ಕು ದೇಗುಲಗಳ ತೆರವಿಗೆ ಸರ್ಕಾರ ನೀಡಿರುವ ನಿರ್ದೇಶನದ ಬಗ್ಗೆ ಜಿಲ್ಲಾಡಳಿತ ಶಾಸಕರಿಗೆಮನವರಿಕೆ ಮಾಡಿಕೊಟ್ಟಿದೆ. ಆದರೆ ಶಾಂತಿಗ್ರಾಮ ಬಳಿ ಇರುವ ಆಂಜನೇಯ ಸ್ವಾಮಿ ದೇವಾಲಯ ತೆರವಿಗೆಕೋರ್ಟ್ ತಡೆ ನೀಡಿದೆ.

ನೂರಾರು ವರ್ಷ ಇತಿಹಾಸ ಹೊಂದಿರುವ ಆಂಜನೇಯ ಸ್ವಾಮಿ ದೇವಾಲಯ ಉಳಿವಿಗೆ ಗ್ರಾಮಸ್ಥರುಹೋರಾಟ ನಡೆಸುತ್ತಿದ್ದಾರೆ. ಹೈಕೋರ್ಟ್ ನಿಂದ ಎರಡು ಬಾರಿ ತಡೆಯಾಜ್ಞೆ ತಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.