ಹಾಸನ: ಜಿಲ್ಲೆಯಲ್ಲಿ ಕಾಡಾನೆ–ಮಾನವನ ಸಂಘರ್ಷ ಮುಂದುವರಿದಿದ್ದು, ಶನಿವಾರ ಕಾಡಾನೆಗಳ ದಾಳಿಗೆ ಕೆಲಗಳಲೆ ಗ್ರಾಮದಲ್ಲಿ ವೃದ್ಧ ಮೃತಪಟ್ಟಿದ್ದಾರೆ.

ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಗ್ರಾಮದ ಕೃಷ್ಣೇಗೌಡ (67) ಮೃತ ವ್ಯಕ್ತಿ. ಬೆಳಿಗ್ಗೆ ಮಗ ಸುದೀಶ್, ಮೊಮ್ಮಗ ಪ್ರಥಮ್ ಜೊತೆ ತೋಟಕ್ಕೆ ತೆರಳುವ ವೇಳೆ ಏಕಾಏಕಿ ಮೂರು ಕಾಡಾನೆ ದಾಳಿ ಮಾಡಿವೆ.

ಕಾಡಾನೆ ಹಿಂಡು ಕಂಡ ಕೂಡಲೇ ಎಲ್ಲರೂ ಓಡಿದ್ದಾರೆ. ಈ ವೇಳೆ ಕೃಷ್ಣೇಗೌಡ ಕೆಳಗೆ ಬಿದ್ದಿದ್ದಾರೆ. ನಂತರ ಕಾಡಾನೆಗಳು ತುಳಿದು ಸಾಯಿಸಿದೆ.ಸುದೇಶ್ ಮತ್ತು ಪ್ರಥಮ್ ತಪ್ಪಿಸಿಕೊಂಡಿದ್ದಾರೆ.

ಸಾವಿಗೀಡಾದ ಕೃಷ್ಣೇಗೌಡ ಮನೆಯಲ್ಲಿ ಶೋಕ ಮಡುಗಟ್ಟಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಈಚೆಗಷ್ಟೇ ಒಂದು ಆನೆಯನ್ನು ಅರಣ್ಯ ಇಲಾಖೆಯಿಂದ ಸೆರೆಹಿಡಿಯಲಾಗಿತ್ತು. ಮತ್ತೊಂದು ಆನೆ ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರಿದಿದ್ದು, ಈ ನಡುವೆ ವೃದ್ಧನ ಸಾವು ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.