ಶುಕ್ರವಾರ, ಆಗಸ್ಟ್ 19, 2022
27 °C

ಕೆನರಾ ಬ್ಯಾಂಕ್‌ನಲ್ಲಿ ಹೋಮ, ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ ಕೆನರಾಬ್ಯಾಂಕಿನಲ್ಲಿ ಬುಧವಾರ ಕೋವಿಡ್ ತಡೆ, ಲೋಕಕಲ್ಯಾಣ ಹಾಗೂ ಬ್ಯಾಂಕ್‌ ಅಭಿವೃದ್ಧಿಗಾಗಿ ಹೋಮ, ಹವನ ನಡೆಸಿದರು

ಹೊಳೆನರಸೀಪುರ: ಕೋವಿಡ್ ತಡೆ, ಲೋಕಕಲ್ಯಾಣ, ಬ್ಯಾಂಕ್‌ ಅಭಿವೃದ್ಧಿ ಗಾಗಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಬುಧವಾರ ಗಣಪತಿ ಹೋಮ, ನವ ಗ್ರಹ ಹೋಮ, ದುರ್ಗಾಹೋಮ, ಮೃತ್ಯುಂಜಯ ಹೋಮ ನಡೆಯಿತು.

ಅರ್ಚಕ ಜಯರಾಮ್ ಭಟ್ ಪೂಜಾ ವಿಧಿ ವಿಧಾನ ನಡೆಸಿದರು.

‘ವಿವಿಧ ಬಗೆಯ ಹೋಮಗಳಿಂದ ಬರುವ ಸುಂಗಂಧ ದ್ರವ್ಯಗಳ ಹೊಗೆಯಿಂದ ಕೋವಿಡ್ ಕ್ರಿಮಿ ನಾಶವಾಗುತ್ತದೆ. ಜತೆಗೆ ಬ್ಯಾಂಕ್‌ನಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿ ಆಗಲಿದೆ’ ಎಂದು ಅರ್ಚಕ ಜಯರಾಮ್‌ ಭಟ್ ತಿಳಿಸಿ ಧಾರ್ಮಿಕ ವಿಧಿ, ವಿಧಾನಗಳ ಮಹತ್ವ ವಿವರಿಸಿದರು.

ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ 9 ಗಂಟೆ ವೇಳೆಗೆ ಪೂರ್ಣಗೊಂಡಿತು.

ಶಾಖಾ ವ್ಯವಸ್ಥಾಪಕ ಕೃಷ್ಣಮೂರ್ತಿ, ಎಲೆಚಾಗಹಳ್ಳಿ ಶಾಖಾ ವ್ಯವಸ್ಥಾಪಕ ಪ್ರವೀಣ್, ದೊಡ್ಡಬ್ಯಾಗತಹಳ್ಳಿ ಶಾಖಾ ವ್ಯವಸ್ಥಾಪಕ ಪೊನ್ನುಸ್ವಾಮಿ, ಬ್ಯಾಂಕ್‌ ಅಧಿಕಾರಿಗಳಾದ ಹೇಮಂತ್, ಸಿದ್ದು, ಶಿವ, ಲಕ್ಷ್ಮೀಪ್ರಸನ್ನ, ಭಾವೇಶ್, ರಾಜೇಶ್, ರಜನಿ, ಚಂದ್ರು, ಕಟ್ಟಡದ ಮಾಲೀಕ ಸ್ವಾಮಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು