ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ನಂಬಿದರೆ ಕೈ ಬಿಡುವುದಿಲ್ಲ

ಪುಣ್ಯಭೂಮಿ ಸಂಸ್ಥೆ ಗೌರವ ನಿರ್ದೇಶಕ ವಿಜಯ್ ಅಂಗಡಿ ಅಭಿಮತ
Last Updated 9 ಏಪ್ರಿಲ್ 2022, 15:19 IST
ಅಕ್ಷರ ಗಾತ್ರ

ಹಾಸನ: ‘ಭೂಮಿ ನಂಬಿದರೆ ಕೈ ಬಿಡುವುದಿಲ್ಲ. ಎಷ್ಟೋ ಜನ ಕೃಷಿಯಿಂದಸಾಕಷ್ಟು ಪಡೆದುಕೊಂಡಿದ್ದರೂ ಕೃಷಿಯನ್ನು ದೂಷಿಸುತ್ತಾರೆ’ ಎಂದು ಪುಣ್ಯಭೂಮಿ ಸಂಸ್ಥೆ ಗೌರವ ನಿರ್ದೇಶಕ ವಿಜಯ್‌ಅಂಗಡಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೌರಿಪುರ ಗ್ರಾಮದ ಪ್ರಗತಿಪರ ರೈತ ಮಹಿಳೆ ಹೇಮಾ ಅನಂತ್‌ಅವರ ತೋಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾಸಂಸ್ಥೆಯ ‘ಬೆಳ್ಳಿ ಬದುಕು’ ಸಮಾರಂಭದಲ್ಲಿ ಮಾತನಾಡಿದರು.

‘ಕೃಷಿ ಲಾಭದಾಯಕವಲ್ಲ ಎಂದು ಹೇಳುವವರೇ ಹೆಚ್ಚು. ಆದರೆ, ಇತ್ತೀಚಿನದಿನಗಳಲ್ಲಿ ಪಟ್ಟಣಗಳಿಂದ ಅನೇಕರು ಹಿಂತಿರುಗಿ ಬರುತ್ತಿರುವುದು ಉತ್ತಮಬೆಳವಣಿಗೆಯಾಗಿದೆ. 1996ರಲ್ಲಿ ಆರಂಭವಾದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾ ಸಂಸ್ಥೆ, ಇಂದು 500ಕ್ಕೂ ಹೆಚ್ಚು ಮಂದಿ ಸದಸ್ಯರನ್ನು ಹೊಂದಿದೆ’ ಎಂದು ವಿವರಿಸಿದರು.

‘ಮಳೆ ನೀರು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಪ್ರತಿಯೊಬ್ಬರು ತಮ್ಮಮನೆಯಲ್ಲಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳಬೇಕು. ಸೈಕಲ್ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಹಣ
ಉಳಿತಾಯವಾಗಲಿದೆ. ಅಕ್ಕಿ, ಉಪ್ಪು, ಎಣ್ಣೆಬಳಕೆ ಕಡಿಮೆ ಮಾಡಿ, ರಾಗಿ ಹೆಚ್ಚು ಬಳಸಬೇಕು’ ಎಂದು ಸಲಹೆ
ನೀಡಿದರು.

ರೈತ ಮಹಿಳೆ ಹೇಮಾ ಅನಂತ್ ಮಾತನಾಡಿ, ‘ಹಲವು ವರ್ಷಗಳ ಹಿಂದೆ ಈ ಜಾಗದಲ್ಲಿ ಏನೂ ಇರಲಿಲ್ಲ. ಭೂಮಿ ತಾಯಿ ಕೈ ಹಿಡಿದಿದ್ದಾಳೆ. ನಮ್ಮ ಕೃಷಿಉತ್ಪನ್ನಗಳನ್ನು ಜನರು ಖರೀದಿಸುತ್ತಿದ್ದಾರೆ’ ಎಂದರು.

ಆಲೂರಿನ ರೈತ ಅರುಣ್ ಕುಮಾರ್ ಮಾತನಾಡಿ, ‘ಕಾಫಿ ತೋಟದಲ್ಲಿಕೆಂಪಿರುವೆ ಸಮಸ್ಯೆ ಇತ್ತು. ಪುಣ್ಯಭೂಮಿ ಸಹಕಾರದಿಂದ ಸೈನಿಕ ಇರುವೆಸಾಕಿದ ಪರಿಣಾಮ ಅನುಕೂಲವಾಗಿದೆ. ಅಲ್ಲದೆ ಕಾಫಿ ಗಿಡದಲ್ಲಿ ಬರುವ
ಬೋರ್‌ ಕಾಯಿಲೆಯೂ ನಿಯಂತ್ರಣವಾಗಿದೆ’ ಎಂದು ನುಡಿದರು.

ರೈತ ಮಾಲತೇಶ್ ಮಾತನಾಡಿ, ‘ಮಳೆ ನೀರು ಸಂಗ್ರಹ ಘಟಕ ಅಳವಡಿಕೆಗೆ ₹25 ಸಾವಿರದಿಂದ ₹30 ಸಾವಿರ ವೆಚ್ಚವಾಗಬಹುದು. ಸಂಗ್ರಹಿಸಿದ ನೀರನ್ನುವರ್ಷವಿಡೀ ಬಳಸಬಹುದು. ತಾರಸಿಯಲ್ಲಿ ಸಣ್ಣಪುಟ್ಟ ತರಕಾರಿ
ಬೆಳೆಯಲಾಗುತ್ತಿದೆ’ ಎಂದರು.

ಹಾನುಬಾಳು ಹೋಬಳಿ ಹಂಜಗೋಡನಹಳ್ಳಿ ಕೃಷಿಕ ನರೇಶ್‌ ಮಾತನಾಡಿದರು.

85 ವರ್ಷದ ರೈತ ರಾಮಾಚಾರ್ ಅವರನ್ನುಸನ್ಮಾನಿಸಲಾಯಿತು. ಹೇಮಾ ಅನಂತ್ ಅವರ ಪುತ್ರ ಆಕಾಶ್ ಮತ್ತು ವೈಡೂರ್ಯ ದಂಪತಿಗೆ ಮಾವಿನ ಗಿಡಗಳನ್ನು ಉಡುಗೊರೆಯಾಗಿನೀಡಲಾಯಿತು. 120 ರೈತರ ಮಾಹಿತಿ ಒಳಗೊಂಡ ‘ರೈತ ನುಡಿ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಜಯಂತಿ ಜಯರಾಮ ಸೌರಚಾಲಿತ ರೇಡಿಯೋ ಉದ್ಘಾಟಿಸಿದರು. ರೈತರಿಗೆಬಿತ್ತನೆಗಾಗಿ ಅರಿಸಿನ, ಮಾಂಗಾಯಿ ಶುಂಠಿ, ಪಟಾವಳಿ ಹಬ್ಬು, ಡ್ರ್ಯಾಗನ್‌ಫ್ರೂಟ್ಸ್‌, ಕೆಸ, ಕಸ್ತೂರಿ ಅರಿಸಿನ ವಿತರಿಸಲಾಯಿತು.

ಪುಣ್ಯಭೂಮಿ ಸಂಸ್ಥೆಯ ದೊಡ್ಡ ವೀರೇಗೌಡ, ರಂಗಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT