ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ನಾಶ ಎಂದಿಗೂ ಸಾಧ್ಯವಿಲ್ಲ: ರಂಭಾಪುರಿ ವೀರಸೋಮೇಶ್ವರ ಶ್ರೀ

Published 18 ಜೂನ್ 2023, 10:55 IST
Last Updated 18 ಜೂನ್ 2023, 10:55 IST
ಅಕ್ಷರ ಗಾತ್ರ

ಆಲೂರು: ‘ಧರ್ಮ ಎಂದೆಂದಿಗೂ ಚಿರಾಯು. ಧರ್ಮದ ನಾಶ ಯಾರಿಂದಲೂ ಸಾಧ್ಯವಿಲ್ಲ. ಧರ್ಮದಿಂದಲೆ ವಿಶ್ವಕ್ಕೆ ಶಾಂತಿ, ಸಾಹಿತ್ಯ, ಸಂಸ್ಕೃತಿ ಸಂವರ್ಧಿಸಲಿದೆ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಜಗದ್ಗುರು ತಿಳಿಸಿದರು.

ಕಾರ್ಜುವಳ್ಳಿ ಹಿರೇಮಠದಲ್ಲಿ ನಡೆದ ವಿಶ್ವಶಾಂತಿಗಾಗಿ ರಂಭಾಪುರಿ ಶ್ರೀಗಳ ಇಷ್ಟಲಿಂಗ ಮಹಾಪೂಜೆ, ಮನೆ-ಮನೆಗೆ ರೇಣುಕ, ಮನ-ಮನಕೆ ರೇಣುಕ ಸಿದ್ಧಾಂತ ಶಿಖಾಮಣಿ ತತ್ವ ಪ್ರಚಾರ ಅಭಿಯಾನ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದರು.

‘ಭಾರತ ದೇಶ ಧರ್ಮ, ಸಂಸ್ಕೃತಿ, ಪರಂಪರೆಗಳ ಆದರ್ಶ ನಾಡು. ಮತ, ಧರ್ಮಗಳು ಬೇರೆಯಾದರೂ ಗುರಿ ಮಾತ್ರ ಒಂದೇ. ವೀರಶೈವ ಧರ್ಮವು ವೇದ, ಆಗಮ, ಉಪನಿಷತ್ ಕಾಲದಷ್ಟೇ ಪುರಾತನವಾದ ಧರ್ಮವಾಗಿದೆ’ ಎಂದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ಡಿ. ಕಾಂತರಾಜು ಮಾತನಾಡಿ, ‘ನಾವು ಎಷ್ಟೇ ದೊಡ್ಡವರಾದರೂ ಧರ್ಮದ ಆಚರಣೆ ಬಿಟ್ಟು ಬದುಕಬಾರದು. ಸಂಸ್ಕಾರವಂತರಾದಾಗ ಮಾತ್ರ ಜನ ನಮ್ಮನ್ನ ಗೌರವಿಸಲು ಸಾಧ್ಯ’ ಎಂದರು.

ಕಾರ್ಜುವಳ್ಳಿ ಮಠದ ಪೀಠಾಧ್ಯಕ್ಷ ಸದಾಶಿವ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಸಂಸ್ಕೃತಿ ಮತ್ತು ಸಂಸ್ಕಾರ ಬಾಳಿನ ಉಜ್ವಲತೆಗೆ ಮುಖ್ಯ. ಹಗಲಿನಲ್ಲಿ ಸೂರ್ಯ, ರಾತ್ರಿಯಲ್ಲಿ ಚಂದ್ರ ಬೆಳಕು ಕೊಡಬಲ್ಲರು. ಆದರೆ, ಸರ್ವ ಕಾಲದಲ್ಲಿ ಸರ್ವ ಜನಾಂಗಕ್ಕೂ ಧರ್ಮದ ನಡೆ ಬೆಳಕು ಕೊಡುತ್ತದೆ’ ಎಂದರು.

ಬೇಲೂರು ಕ್ಷೇತ್ರದ ಶಾಸಕ ಹೆಚ್. ಕೆ ಸುರೇಶ್ ಮಾತನಾಡಿ, ‘ಮಠಗಳು ಧರ್ಮ ಕಾರ್ಯಗಳೊಂದಿಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳ ಪ್ರಗತಿಗೆ ಮತ್ತು ಸರ್ವಧರ್ಮಗಳ ಸಮನ್ವಯತೆ ಸಾಧಿಸುವ ಕೇಂದ್ರಗಳಾಗಿವೆ’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸಿದ್ದೇಶ್ ನಾಗೇಂದ್ರ, ಸಂಕಲಾಪುರಮಠದ ಝಾನ್ಸಿ ವಿದ್ಯಾಸಂಸ್ಥೆಗೆ ₹1.5 ಲಕ್ಷ ಚೆಕ್ಕನ್ನು ಮಠದ ಪೀಠಾಧ್ಯಕ್ಷ ಧರ್ಮರಾಜೇಂದ್ರ ಸ್ವಾಮಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಕಲ್ಮಠ ಪಿಠಾಧ್ಯಕ್ಷ ಮಹಾಂತ ಸ್ವಾಮಿ, ಮಡಬಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್, ಸದಸ್ಯ ಪ್ರದೀಪ್, ಲೀಲಾವತಿ, ಪಾಲಾಕ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT