ಬಾಗೂರು (ನುಗ್ಗೇಹಳ್ಳಿ ): ಚನ್ನರಾಯಪಟ್ಟಣ - ತಿಪಟೂರು ಮುಖ್ಯ ರಸ್ತೆಯಲ್ಲಿ ಬರುವ ಹೋಬಳಿಯ ಕಾರೇಹಳ್ಳಿ - ಅಣತಿ ಗ್ರಾಮದವರೆಗಿನ ಮುಖ್ಯ ರಸ್ತೆಗೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಾರೇಹಳ್ಳಿ ಗ್ರಾಮಸ್ಥರು ಗುರುವಾರ ಪ್ರತಿಭಟಿಸಿದರು.

ರಸ್ತೆ ನಿರ್ಮಾಣಕ್ಕೆ ಅಡ್ಡಿ : ‘3 ವರ್ಷಗಳ ಹಿಂದೆ ಚನ್ನರಾಯಪಟ್ಟಣ - ತಿಪಟೂರು ಮುಖ್ಯ ರಸ್ತೆಯಿಂದ ಕಾರೇಹಳ್ಳಿ ಗ್ರಾಮದವರೆಗೆ 850 ಮೀಟರ್ ರಸ್ತೆ ನಿರ್ಮಾಣಕ್ಕೆ ಸುಮಾರು ₹80 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ ಈ ರಸ್ತೆಯ ಜಮೀನಿನ ಮಾಲೀಕ ರೈತರೊಬ್ಬರು ರಸ್ತೆ ನಿರ್ಮಾಣದ ಜಾಗಕ್ಕೆ ಪರಿಹಾರ ನೀಡುವಂತೆ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಲೋಕಪಯೋಗಿ ಇಲಾಖೆ ದಾಖಲೆಗಳನ್ನು ಸಲ್ಲಿಸಿ ಭೂ ಮಾಲೀಕರು ತಂದಿದ್ದ ತಡೆಯಾಜ್ಞೆ ತೆರವು ಮಾಡಿತ್ತು. 50 ವರ್ಷಗಳಿಂದಲೂ ರಸ್ತೆ ಇದ್ದು ನಾಲ್ಕೈದು ಬಾರಿ ಲೋಕೋಪಯೋಗಿ ಇಲಾಖೆ ರಸ್ತೆ ಅಭಿವೃದ್ಧಿ ಮಾಡಿತ್ತು. ಆದರೂ ಕೆಲವರು ತೊಂದರೆ ಕೊಡುತ್ತಿದ್ದಾರೆ’ ಎಂದು ಮಾಜಿ ಕೃಷಿ ಪತ್ತಿನ ಅಧ್ಯಕ್ಷ ನಟೇಶ್ ಆರೋಪಿಸಿದರು.

ನವೀಕರಣಕ್ಕಾಗಿ ಗುತ್ತಿಗೆದಾರರು ರಸ್ತೆಯ ಹಳೆಯ ಡಾಂಬರು ತೆರವುಗೊಳಿಸಿದ್ದರು. ಆದರೆ ಇತ್ತ ಹಳೆಯ ರಸ್ತೆಯೂ ಇಲ್ಲ ಹೊಸತೂ ಇಲ್ಲ. ಶಾಲಾ ಮಕ್ಕಳು, ರೈತರು ಅದರ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅನೇಕ ಅಪಘಾತಗಳು ನಡೆದು ವಾಹನ ಸವಾರರಿಗೆ ಗಾಯಗಳಾಗಿವೆ. ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು.

‘ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ‘ಅಡ್ಡಿಪಡಿಸಬೇಡಿ ಎಂದು ಭೂ ಮಾಲೀಕರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ. ಕೋರ್ಟ್ ಆದೇಶದಿಂದ ಈಗ ನ್ಯಾಯ ಸಿಕ್ಕಿದೆ. ಈ ಭೂಮಾಲೀಕರು ಪಾಪನ ಘಟ್ಟ ಹಾಗೂ ಜಾಬ್ ಘಟ್ಟ ಗ್ರಾಮದ ಹೊರಗಿನ ರಸ್ತೆ ಅಭಿವೃದ್ಧಿಗೂ ಅಡ್ಡಿಪಡಿಸಿದ್ದರು. ಸಂತೇ ಶಿವರ ಏತ ನೀರಾವರಿ ಯೋಜನೆಯ ಪೈಪ್ ಲೈನ್ ಅಳವಡಿಕೆಗೂ ತಡೆ ಮಾಡಿದರು’ ಎಂದು ಗ್ರಾಮಸ್ಥ ಬ್ಯಾಂಕ್ ಚಂದ್ರಣ್ಣ ತಿಳಿಸಿದರು.

ಮುಖಂಡರಾದ ಅಣತಿ ವೆಂಕಟೇಶ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಕೆ.ಟಿ. ನಟೇಶ್, ಪಂಚಾಯಿತಿ ಉಪಾಧ್ಯಕ್ಷ ಕೆ. ಸತೀಶ್, ಮಾಜಿ ಅಧ್ಯಕ್ಷ ಬಸವಣ್ಣ, ಕೆಬಿಎಂ ಮಂಜುನಾಥ್, ಉಮಾ, ನ್ಯಾಯಬೆಲೆ ಅಂಗಡಿ ಜಗದೀಶ್, ಸೈಯಾದ್ರಿ ಗೌಡ, ರಾಮೇಗೌಡ, ಪುನೀತ್, ಗೋಪಾಲ್, ಕೆ.ವಿ. ರಾಜಣ್ಣ, ಪುಟ್ಟಸ್ವಾಮಿ, ರಿಯಾನ್, ಬಾಳೆಕಾಯಿ ಕಾಂತರಾಜ್, ಬೈರೇಗೌಡ, ರಕ್ಷಿತ್, ದೇವರಾಜ್, ರತ್ನಮ್ಮ, ಸಣ್ಣ ತಾಯಮ್ಮ, ಶೀಲಾ, ಮಂಜುಳಮ್ಮ, ವೀಣಾ, ಪುಷ್ಪಲತಾ, ಗಿರಿಜ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.