ಹಾಸನ: ಜಿಲ್ಲೆಯಲ್ಲಿ ಮೇ ತಿಂಗಳಿಂದಲೇ ಆರಂಭವಾದ ಮಳೆ ಆಗಸ್ಟ್ ಅಂತ್ಯದವರೆಗೂ ನಿರಂತರವಾಗಿ ಸುರಿದಿದೆ. ಇದರಿಂದಾಗಿ ಜಿಲ್ಲೆಯಾದ್ಯಂತ ರಸ್ತೆಗಳು ಹದಗೆಟ್ಟಿವೆ. ತುಂಬಿದ ಕೆರೆಗಳು ಒಡೆದು, ರಸ್ತೆ, ತೋಟಗಳಿಗೆ ನುಗ್ಗಿದ್ದು, ಬಹುತೇಕ ಗ್ರಾಮೀಣ ರಸ್ತೆಗಳಲ್ಲಿ ಜನರ ಓಡಾಟಕ್ಕೆ ರಸ್ತೆಗಳೇ ಇಲ್ಲದಂತಾಗಿದೆ.

ಈ ಬಾರಿಯ ಮಳೆಯಿಂದ ಬಯಲು ಸೀಮೆ ಪ್ರದೇಶದ ಕೆರೆಗಳೂ ಭರ್ತಿಯಾಗಿವೆ. 300ಕ್ಕೂ ಅಧಿಕ ಕೆರೆಗಳು ತುಂಬಿದ್ದು, ಈ ಕೆರೆಗಳ ಹೆಚ್ಚುವರಿ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ರಸ್ತೆಯಲ್ಲಿ ಕೊರಕಲು ಬಿದ್ದಿದ್ದು, ವಾಹನಗಳ ಓಡಾಟ ದುಸ್ತರವಾಗಿದೆ.

ಹಿರೀಸಾವೆ ಹೋಬಳಿಯಲ್ಲಿ ಸತತವಾಗಿ 3 ತಿಂಗಳು ಕಾಲ ಬಿದ್ದ ಮಳೆಗೆ ಗ್ರಾಮೀಣ ಭಾಗದ ಜಿಲ್ಲಾ ಪಂಚಾಯಿತಿ ರಸ್ತೆಗಳೂ ಸೇರಿದಂತೆ ಸಣ್ಣ ರಸ್ತೆಗಳು ಸಂಪೂರ್ಣ ಹಾಳಾಗಿವೆ.ಇದರಿಂದ ಹೋಬಳಿ ಕೇಂದ್ರ ಸೇರಿದಂತೆ ಇತರೆ ಗ್ರಾಮಗಳಿಗೆ ಹೋಗಲು ಸಾರ್ವಜನಿಕರಿಗೆ ತೊಂದರೆಯಾಗಿದೆ.

ಹಿರೀಸಾವೆಯಿಂದ 2ಕಿ.ಮೀ ದೂರದಲ್ಲಿ ಇರುವ ತೂಬಿನಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ2ರಸ್ತೆಗಳ ಡಾಂಬರ್, ಹಳ್ಳದ ನೀರಿನ ರಭಸಕ್ಕೆ ಕಿತ್ತು ಹೋಗಿದೆ.ಎರಡು ಸೇತುವೆಗಳ ಪಕ್ಕ ರಸ್ತೆ ಕೊಚ್ಚಿ ಹೋಗಿದೆ.ಈ ಗ್ರಾಮದವರು ಮತ್ತು ವಿದ್ಯಾರ್ಥಿಗಳು ನಿತ್ಯ ಕೊತ್ತನಹಳ್ಳಿ,ಕೊಳ್ಳೇನಹಳ್ಳಿ ಅಥವಾ ಕಿರೀಸಾವೆ ಮೂಲಕ6ಕಿ.ಮೀ.ಸುತ್ತಿ ಬರಬೇಕಿದೆ.

‘ರಸ್ತೆ ಮತ್ತು ಸೇತುವೆ ಸರಿಪಡಿಸಲು ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಎರಡು ತಿಂಗಳ ಹಿಂದೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೆ ರಸ್ತೆ,ಸೇತುವೆಯ ದುರಸ್ತಿ ಕಾರ್ಯ ಪ್ರಾರಂಭವಾಗಿಲ್ಲ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಶಂಕರ್.

ಹಿರೀಸಾವೆಯಿಂದ ಕೊತ್ತನಹಳ್ಳಿ, ಕೊಳ್ಳೇನಹಳ್ಳಿಯ ಸಂಪರ್ಕ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದೆ.ಮಳೆ ನಿಂತು ಎರಡು ತಿಂಗಳಾದರೂ,ಇನ್ನೂ ಹಲವು ಗ್ರಾಮಗಳ ಸಣ್ಣ ರಸ್ತೆಗಳ ದುರಸ್ತಿ ಕೆಲಸ ಪ್ರಾರಂಭವಾಗಿಲ್ಲ.

ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಮಳೆಯಿಂದಾಗಿ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಅನೇಕ ರಸ್ತೆಗಳು ಹಾಳಾಗಿದ್ದು, ವಾಹನಗಳು ಹಾಗೂ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಗ್ರಾಮಾಂತರ ಪ್ರದೇಶದಲ್ಲಿ ಕೆಲವೆಡೆ 50 ಮನೆಗಳಿರುವ ಬಡಾವಣೆಗಳ ಮಣ್ಣಿನ ರಸ್ತೆ ಹದಗೆಟ್ಟಿದೆ. ಅಚ್ಚುಕಟ್ಟು ಪ್ರದೇಶಗಳ ರಸ್ತೆಗಳೂ ಇದಕ್ಕಿಂತ ಭಿನ್ನವಾಗಿಲ್ಲ. ಈ ರಸ್ತೆಗಳ ದುರಸ್ತಿಗೆ ಕ್ರಮ ತೆಗೆದುಕೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಜನರ ಒತ್ತಾಯ.

ಭಾರಿ ಮಳೆಯಿಂದ ಆಲೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 200 ಕಿ.ಮೀ. ರಸ್ತೆಗಳು ಹದಗೆಟ್ಟಿವೆ. ಈ ಬಗ್ಗೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ
ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಈವರೆಗೂ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಆಗಾಗ ಮಳೆ ಆಗುತ್ತಿರುವುದರಿಂದ ಕೆಲ ಗ್ರಾಮಗಳಲ್ಲಿರುವ ರಸ್ತೆಗಳು ತೀವ್ರ ಹಾನಿಗೊಳಗಾಗುತ್ತಿವೆ. ಕೆಲ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಂಟಿಗಳು
ಬೆಳೆದಿವೆ. ಕೆಲ ರಸ್ತೆಗಳು ಕೆರೆ ಏರಿ ಮೂಲಕ ಹಾದು ಹೋಗಿದ್ದು, ರಸ್ತೆಗಳು ಗುಂಡಿಗಳಾಗಿದ್ದು, ಜನ, ಜಾನುವಾರುಗಳು ತಿರುಗಾಡಲು ಸಾಧ್ಯವಾಗುತ್ತಿಲ್ಲ.

ಹಳೇಬೀಡಿನ ಬೇಲೂರು– ಬಾಣಾವರ ರಸ್ತೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ಬೇರೆ ಎಲ್ಲ ರಸ್ತೆಗಳು ಮಳೆಯಿಂದ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿದೆ.

ದ್ವಾರಸಮುದ್ರ ಕೆರೆಯ ಏರಿ ದುರಸ್ತಿ ಮಾಡಿ ಒಂದೂವರೆ ವರ್ಷ ಕಳೆದಿದೆ. ಆದರೆ, ಏರಿಯ ಮೇಲಿನ ರಸ್ತೆಗೆ ಡಾಂಬರ್ ಹಾಕುವ ಕೆಲಸ ವಿಳಂಬವಾಗಿದ್ದು, ಏರಿಯಲ್ಲಿ ಗುಂಡಿ
ಗಳು ನಿರ್ಮಾಣವಾಗಿವೆ. ಮಣ್ಣಿನ ರಸ್ತೆಯಲ್ಲಿ ಜಲ್ಲಿ ಮೇಲಿದ್ದಿವೆ. ವಾಹನ ಸಂಚರಿಸುವಾಗ ರಸ್ತೆ ದೂಳುಮಯ
ವಾಗುತ್ತಿದೆ. ಚುರುಕಿನಿಂದ ಡಾಂಬರೀ
ಕರಣ ಮಾಡಬೇಕು ಎಂದು ಶಾಸಕ ಕೆ.ಎಸ್.ಲಿಂಗೇಶ್ ಸೂಚಿಸಿದ್ದರೂ, ಗುತ್ತಿಗೆದಾರರು ವಿಳಂಬ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.

ಹೊಯ್ಸಳೇಶ್ವರ ದೇವಾಲಯ ರಸ್ತೆಯಲ್ಲಿ ಬಸವೇಶ್ವರ ವೃತ್ತದ ಬಳಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದವು. ಡಾಂಬರ್ ಹಾಕದೆ ಜಲ್ಲಿ, ಮಣ್ಣು ತುಂಬಿಸಲಾಗಿದೆ. ಗುಂಡಿ ಮುಚ್ಚುವ ಜಾಗದಲ್ಲಿ ಸಮತಟ್ಟು ಮಾಡದೆ ಇರುವುದರಿಂದ ಈಗಲೂ ವಾಹನ ಅಪಘಾತಗಳಿಗೆ ಅವಕಾಶ ಕಲ್ಪಿಸಿದಂತಾಗಿದೆ.

ರಾಜನಶಿಯೂರು ರಸ್ತೆಯಲ್ಲಿ ಹೆಜ್ಜೆಗೊಂದು ಗುಂಡಿಗಳಾಗಿವೆ. ಹಳೇಬೀಡಿನಿಂದ 5 ಕಿ.ಮೀ ರಾಜಶಿಯೂರು ತಲುಪುವವರೆಗೆ ಗುಂಡಿಯಿಂದ ಗುಂಡಿಗೆ ಇಳಿದು ವಾಹನ ಚಾಲನೆ ಮಾಡುವಂತಾಗಿದೆ. ಹಗರೆ ಮಾರ್ಗದ ಹಳೇಬೀಡು ಹಾಸನ ರಸ್ತೆಯಲ್ಲಿ ಬಸ್ತಿಹಳ್ಳಿ ದಾಟಿದಾಕ್ಷಣ ಪುಷ್ಪಗಿರಿಯವರೆಗೆ ಗುಂಡಿ ಬಿದ್ದಿದೆ.

‘ದುರಸ್ತಿಗೆ ₹264 ಕೋಟಿ ಬೇಕು’

‘ಅರಕಲಗೂಡು ತಾಲ್ಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿ 89.49 ಕಿ.ಮೀ ಹಾನಿಯಾಗಿದ್ದು, ಇದರ ದುರಸ್ತಿಗೆ ₹49.65 ಕೋಟಿ, ಹಾನಿಯಾಗಿರುವ ಜಿಲ್ಲಾ ಮುಖ್ಯ ರಸ್ತೆ ದುರಸ್ತಿಗೆ ₹188.55 ಕೋಟಿ ಅಗತ್ಯವಿದೆ. ರಾಜ್ಯ ಹೆದ್ದಾರಿಯಲ್ಲಿ 10 ಕಿರು ಸೇತುವೆಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 23 ಕಿರು ಸೇತುವೆಗಳಿಗೆ ಹಾನಿಯಾಗಿದ್ದು, ಇದರ ಮರುನಿರ್ಮಾಣಕ್ಕೆ ₹9.8 ಕೋಟಿ ಅಗತ್ಯವಿದೆ. ರಸ್ತೆ, ಕಿರು ಸೇತುವೆಗಳ ದುರಸ್ತಿಗೆ ಒಟ್ಟು ₹264 ಕೋಟಿ ಅಗತ್ಯವಿದ್ದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಕ್ಷಣದ ದುರಸ್ತಿಗೆ ಕಾರ್ಯಕ್ಕೆ ₹1.85 ಕೋಟಿ ಕೇಳಿದ್ದು, ₹1.50 ಕೋಟಿ ಮಂಜೂರಾಗಿರುವ ಮಾಹಿತಿ ಬಂದಿದೆ. ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಇಇ ಬಿ.ಎಸ್. ಗಣೇಶ್ ತಿಳಿಸಿದರು.

‘ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 2,415 ಕಿ.ಮೀ. ರಸ್ತೆ ಹಾನಿಗೊಳಗಾಗಿದ್ದು, ಇದರ ದುರಸ್ತಿಗೆ ₹5.86 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ಯಾರು ಏನಂತಾರೆ?

‘ಹಣ ಬಿಡುಗಡೆಯಾದ ತಕ್ಷಣ ದುರಸ್ತಿ’

ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪರಿಸ್ಥಿತಿ ಮತ್ತು ದುರಸ್ತಿಗೆ ತಗಲುವ ವೆಚ್ಚದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ದುರಸ್ತಿ ಪ್ರಮಾಣ ಆಧರಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

–ನರಸಿಂಹಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಆಲೂರು

‘ಅನುದಾನ ಸಾಕಾಗದು’

ರಸ್ತೆ ದುರಸ್ತಿಗೆ ನೀರಾವರಿ ಇಲಾಖೆಯಿಂದ ₹75 ಲಕ್ಷ, ಲೋಕೋಪಯೋಗಿ ಇಲಾಖೆಯಿಂದ ₹1 ಕೋಟಿ ಬಿಡುಗಡೆಯಾಗಿದೆ. ಈ ಅನುದಾನ ಸಾಕಾಗುವುದಿಲ್ಲ. ನೀರಾವರಿ ಇಲಾಖೆಯಿಂದ ಅಂದಾಜು ₹15 ಕೋಟಿ, ಆರ್ಡಿಪಿಆರ್ ಇಲಾಖೆಯಿಂದ ₹10 ಕೋಟಿ ಬಿಡುಗಡೆ ಮಾಡಬೇಕು. ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿಗೆ ₹5 ಕೋಟಿ ಅಗತ್ಯ ಇದೆ.

–ಸಿ.ಎನ್.ಬಾಲಕೃಷ್ಣ, ಶಾಸಕ

‘ರಸ್ತೆ ಇಲ್ಲದೇ ಸಂಚಾರ ದುಸ್ತರ’

ರಸ್ತೆ ಇಲ್ಲದೆ, ಸರಿಯಾದ ಸಮಯಕ್ಕೆ ಶಾಲಾ, ಕಾಲೇಜಿಗೆ ಹೋಗಲು ಆಗುತ್ತಿಲ್ಲ. ಹಳ್ಳದಲ್ಲಿ ನೀರು ಹರಿಯುತ್ತಿದ್ದು, ನಡೆದುಕೊಂಡು ಹೋಗಲು ಆಗದೆ, ಊರಿನಿಂದ ಹೋಗುವ ಬೈಕ್ಗಳನ್ನು ಕಾಯಬೇಕಿದೆ. ವಾಹನ ಇಲ್ಲದವರಿಗೆ ಕಷ್ಟವಾಗಿದೆ.

–ಟಿ.ಎಲ್. ವಿಕಾಸ್, ವಿದ್ಯಾರ್ಥಿ, ತೂಬಿನಕೆರೆ, ಹಿರೀಸಾವೆ ಹೋಬಳಿ

‘ಆರೋಗ್ಯ ಸಮಸ್ಯೆ ಉಲ್ಬಣ’

ಗುಂಡಿಯಿಂದಾಗಿ ವಾಹನಗಳಿಗೆ ಹೆಚ್ಚಿನ ಇಂಧನ ಬಳಕೆಯಾಗುತ್ತಿದೆ. ವಾಹನ ಬಾಡಿಗೆಯಿಂದ ಲಾಭ ಇಲ್ಲದಂತಾಗಿದೆ. ಈ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದರಿಂದ ಸೊಂಟ, ಮೈಕೈ ನೋವು ಕಾಣಿಸಿಕೊಳ್ಳುತ್ತಿದೆ. ದೂಳಿನಿಂದ ಕೆಮ್ಮು, ಶೀತ ಮೊದಲಾದ ಶ್ವಾಸಕೋಶ ಕಾಯಿಲೆ ಎದುರಿಸುವಂತಾಗಿದೆ.

–ಗಣೇಶ, ಆಟೊರಿಕ್ಷಾ ಚಾಲಕ, ಹಳೇಬೀಡು

‘ತಕ್ಷಣ ದುರಸ್ತಿ ಮಾಡಿ’

ಹಳೇಬೀಡಿನಲ್ಲಿ ಗುಂಡಿ ಇಲ್ಲದ ರಸ್ತೆಯೇ ಇಲ್ಲದಂತಾಗಿದೆ. ನಡೆದಾಡುವುದಕ್ಕೂ ಸಮಸ್ಯೆಯಾಗಿದೆ. ತಕ್ಷಣ ರಸ್ತೆಗಳನ್ನು ದುರಸ್ತಿ ಮಾಡಿಸಿದರೆ ಮಾತ್ರ ಜನ ನೆಮ್ಮದಿಯಿಂದ ಪ್ರಯಾಣ ಮಾಡಬಹುದು.

–ಜಿ.ಎನ್.ಗಂಗಾಧರಪ್ಪ, ಕಾಂಗ್ರೆಸ್ ಮುಖಂಡ, ಹಳೇಬೀಡು

‘ಕೂಡಲೇ ಹಣ ಬಿಡುಗಡೆ ಮಾಡಿ’

ತಾಲ್ಲೂಕಿನಲ್ಲಿ ಸುರಿದ ಭಾರಿ ಪ್ರಮಾಣದ ಮಳೆಗೆ ರಸ್ತೆ ಸೇರಿದಂತೆ ಅಪಾರ ಪ್ರಮಾಣದ ಆಸ್ತಿಗಳಿಗೆ ಹಾನಿಯಾಗಿದೆ. ಸಂಬಂಧಿಸಿದ ಇಲಾಖೆಗಳು ನಷ್ಟದ ಅಂದಾಜು ತಯಾರಿಸಿ ಪ್ರಸ್ತಾವ ಸಲ್ಲಿಸಿವೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು.

–ಎ.ಟಿ.ರಾಮಸ್ವಾಮಿ, ಅರಕಲಗೂಡು ಶಾಸಕ

ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಹಿ.ಕೃ. ಚಂದ್ರು, ಎಂ.ಪಿ. ಹರೀಶ್, ಸಿದ್ದರಾಜು, ಎಚ್.ಎಸ್. ಅನಿಲ್ ಕುಮಾರ್, ಜಗದೀಶ್ ಹೊರಟ್ಟಿ, ಜಿ. ಚಂದ್ರಶೇಖರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.