ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ ಪುರಸಭೆ ಉಪಚುನಾವಣೆ: ಕಾಂಗ್ರೆಸ್‌ನ ರೇಷ್ಮಾ ಬಾನುಗೆ ಗೆಲುವು

Published 30 ಡಿಸೆಂಬರ್ 2023, 14:24 IST
Last Updated 30 ಡಿಸೆಂಬರ್ 2023, 14:24 IST
ಅಕ್ಷರ ಗಾತ್ರ

ಸಕಲೇಶಪುರ: ಪುರಸಭೆ 7ನೇ ವಾರ್ಡ್‌ಗೆ ಡಿ. 27ರಂದು ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರೇಷ್ಮಾ ಬಾನು ಗೆಲುವು ಸಾಧಿಸಿದ್ದಾರೆ.

ರೇಶ್ಮಾಬಾನು 217 ಮತಗಳನ್ನು ಪಡೆದರೆ ಜೆಡಿಎಸ್‌ ಅಭ್ಯರ್ಥಿ ಅರುಣಾ ಭಾರ್ಗವಿ 202 ಮತಗಳನ್ನು ಪಡೆದರು. ಎಸ್‌ಡಿಪಿಐ ಅಭ್ಯರ್ಥಿ ಸಿಂಬ್ರಿನ್‌ 20 ಹಾಗೂ ನೋಟಕ್ಕೆ 7 ಮತಗಳನ್ನು ನೀಡಿದ್ದಾರೆ.

ವಿಜಯೋತ್ಸವ: ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದ ರಾಜಬೀದಿ ಹಾಗೂ ಕುಶಾಲನಗರ ಬಡಾವಣೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿದರು. ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರಣ್ಣ, ಪಕ್ಷದ ಮುಖಂಡ ಸೈಯದ್‌ ಮುಫೀಜ್‌, ಪುರಸಭಾ ಸದಸ್ಯರಾದ ಅಣ್ಣಪ್ಪ, ಅನ್ನಪೂರ್ಣ, ಕೊಲ್ಲಹಳ್ಳಿ ಸಲೀಂ, ಬೈಕೆರೆ ದೇವರಾಜ್‌, ಪುರಸಭೆ ಮಾಜಿ ಅಧ್ಯಕ್ಷೆ ಕೌಲಸ್ಯ ಲಕ್ಷ್ಮಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT