ಹಾಸನ: ಮರ್ಯಾದೆಗೇಡು ಹತ್ಯೆಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳು ಅಂತ್ಯವಾಗಲಿ. ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ರಾಜ್ಯದ 40ಸಾವಿರ ಸರ್ಕಾರಿ ಶಾಲೆಗಳ ಮುಚ್ಚುವಿಕೆ ವಿರೋಧಿಸಿ ಎಂದು ಎಐಡಿಎಸ್ಒ ವತಿಯಿಂದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಪ್ರತಿರೋಧ ದಿನವನ್ನಾಗಿ ನಗರದ ಮಹಾರಾಜ ಪಾರ್ಕ್, ಆನಂದ ಭಾರತಿ ಪ್ರೌಢಶಾಲೆ, ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪ್ರಧಾನ, ಸರ್ಕಾರಿ ಬಾಲಕರ ಪ್ರೌಢಶಾಲೆ, ಹಂಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ, ಒಂದೆಡೆ ಬೆಂಕಿ, ಮತ್ತೊಂದೆಡೆ ಹೂವು—ಎರಡನ್ನೂ ಸಮಾನವಾಗಿ ಸ್ವೀಕರಿಸಿದ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಅವರ ಜೀವನವೇ ಪ್ರತಿರೋಧದ ಸಂಕೇತ. ಅವರ ಜನ್ಮದಿನವನ್ನು ಅತ್ಯಂತ ಗೌರವದಿಂದ ನೆನೆಯಬೇಕು ಎಂದರು.

ಸಾವಿತ್ರಿಬಾಯಿ ಫುಲೆ ಅವರನ್ನು ಕೇವಲ ಶಿಕ್ಷಕಿಯಾಗಿ ನೋಡಬಾರದು. ಅವರು ಶೋಷಣೆಯ ವಿರುದ್ಧ ಹೋರಾಡಿದ ಧೈರ್ಯಶಾಲಿ ಯೋಧೆ ಎಂದು ಹೇಳಿದರು.

‘ಪುಣೆಯ ಭಿಡೆವಾಡಾ ಶಾಲೆಗೆ ಹೋಗುವಾಗ ಅವರ ಮೇಲೆ ಕೆಸರು, ಸಗಣಿ ಹಾಗೂ ಕಲ್ಲು ಎಸೆಯಲಾಗುತ್ತಿತ್ತು. ಆದರೆ ಯಾವುದೇ ಅವಮಾನಕ್ಕೂ ತಲೆಬಾಗದೇ, ಮತ್ತೊಂದು ಸೀರೆ ಹೊತ್ತುಕೊಂಡು ಶಿಕ್ಷಣದ ಹೋರಾಟ ಮುಂದುವರಿಸಿದರು. ನನ್ನ ಮೇಲೆ ಎಸೆಯುವ ಕಲ್ಲುಗಳು ನನಗೆ ಅಡ್ಡಿಯಲ್ಲ, ಸ್ಫೂರ್ತಿ ಎಂಬ ಅವರ ಮಾತುಗಳು ಇಂದಿಗೂ ಪ್ರೇರಣೆಯಾಗಿದೆ’ ಎಂದರು.

‘ಸಮಾಜದಲ್ಲಿ ಅನೇಕ ಸಾಮಾಜಿಕ ಪಿಡುಗುಗಳು ತಾಂಡವವಾಡುತ್ತಿದ್ದು, ಮರ್ಯಾದೆಗೇಡು ಹತ್ಯೆಯಂತಹ ಪ್ರಕರಣಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ಹಾಗೂ ನಿನ್ನೆ ಬೆಂಗಳೂರಿನ ದೇವನಹಳ್ಳಿ ನಡೆದ ಘಟನೆ ಇದಕ್ಕೆ ಸಾಕ್ಷಿ. ಸಮಾಜದಲ್ಲಿ ಈ ರೀತಿಯ ಮರ್ಯಾದೆ - ಹೀನ ಹತ್ಯೆಗಳು ಕೊನೆಯಾಗಬೇಕು. ಜಾತಿ- ಧರ್ಮ ಎಲ್ಲದಕ್ಕಿಂತ ಮಾನವೀಯತೆಯೇ ಮಿಗಿಲು ಎನ್ನುವುದು ಪ್ರತಿಯೊಬ್ಬರಿಗೂ ಮನದಟ್ಟಾಗಬೇಕು’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿ ಸುಷ್ಮಾ ಮಾತನಾಡಿ, ‘ಸಾವಿತ್ರಿಬಾಯಿ ಫುಲೆ ಕೇವಲ ಶಿಕ್ಷಕಿಯಲ್ಲ. ದಿಕ್ಕಿಲ್ಲದವರಿಗೆ ಆಸರೆಯಾಗಿದ್ದರು. 1868ರಲ್ಲಿ ಅನ್ಯಜಾತಿ ವಿವಾಹದ ಕಾರಣಕ್ಕೆ ಹತ್ಯೆಗೆ ಮುಂದಾಗಿದ್ದ ಗುಂಪಿನಿಂದ ಒಂದು ಜೋಡಿಯನ್ನು ರಕ್ಷಿಸಿದ ಘಟನೆ ಉಲ್ಲೇಖಿಸಿದ ಅವರು, 150 ವರ್ಷಗಳಾದರೂ ಸಮಾಜದಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ಅಮಾನವೀಯ ಕೃತ್ಯಗಳು ಸಂಪೂರ್ಣವಾಗಿ ಕೊನೆಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ, ಅವರಲ್ಲಿದ್ದ ಧೈರ್ಯ, ತಾಳ್ಮೆ ಮತ್ತು ಹೋರಾಟದ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಆನಂದ ಭಾರತಿ ಪ್ರೌಢಶಾಲೆ, ಸರ್ಕಾರಿ ಬಾಲಕರ ಮತ್ತು ಬಾಲಕಿಯರ ಪ್ರೌಢಶಾಲೆ ಪ್ರಧಾನ, ಮಹಾರಾಜ ಪಾರ್ಕ್ ಸೇರಿದಂತೆ ನಗರದ ವಿವಿಧೆಡೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ನಡುವೆ ಆಚರಿಸಲಾಯಿತು. ರಾಜ್ಯ ಘಟಕದ ಖಜಾಂಚಿ ಸುಭಾಷ್, ಉಪಾಧ್ಯಕ್ಷ ಅಭಿಷೇಕ್ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.