ಮುಳ್ಳಿಗೆ ಮುಳ್ಳೆ ಉತ್ತರ. ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ವಿಡಿಯೊ ತುಣುಕುಗಳು ಆಡಿಯೊ ಹಾಗೂ ಮಿಮಿಕ್ರಿ ಬಿಡುತ್ತಾರೆ. ಅವರಿಗೆ ನೀವೂ ತಕ್ಕ ಉತ್ತರ ನೀಡಿ.
-ಕೆ.ಎಂ. ಶಿವಲಿಂಗೇಗೌಡ, ಶಾಸಕ
ಸಚಿವರು ಮಾಡುವ ಕೆಲಸವನ್ನು ಅರಸೀಕೆರೆ ಶಾಸಕರು ಮಾಡುತ್ತಿದ್ದಾರೆ. ಜನರ ಅನೂಕೂಲಕ್ಕಾಗಿ ಬೃಹತ್ ಯೋಜನೆ ತರುತ್ತಿದ್ದಾರೆ. ನೂತನ ಬಸ್ ನಿಲ್ದಾಣಕ್ಕೆ ಅವರ ಹೋರಾಟ ಇದೆ. ನಾವೆಲ್ಲರೂ ಅವರ ಕೈ ಬಲಪಡಿಸಬೇಕು.
-ಅರುಣ್‌ಕುಮಾರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ
ಶಾಸಕರ ಅಭಿವೃದ್ದಿ ಸಹಿಸದವರು ಅರ್ಥವಿಲ್ಲದ ಮಾತು ಆಡುತ್ತಾರೆ. ಶಾಸಕರ ಅಭಿವೃದ್ದಿ ಕೆಲಸಗಳು ಏನು ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಬಡವರ ಜೀವನ ಉತ್ತಮವಾಗಿದೆ.
-ಧರ್ಮಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ