ಹೊಳೆನರಸೀಪುರ: ಮಕ್ಕಳಿಗೆ ಸದಾ ಓದಿ,ಓದಿ ಎಂದು ಹೇಳದೆ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ಕ್ರೀಡೆ, ಛಾಯಾಗ್ರಹಣದ ಬಗ್ಗೆ ಆಸಕ್ತಿ ಮೂಡಿಸಿ ಎಂದು ಸಂಸದ ಶ್ರೇಯಶ್ ಪಟೇಲ್ ಸಲಹೆ ನೀಡಿದರು.

ಭಾನುವಾರ ಸೋಷಿಯಲ್ ಕ್ಲಬ್ ಸಭಾಂಗಣದಲ್ಲಿ ಸ್ವಜಯ್ ಚಿತ್ರಕಲಾ ಅಕಾಡೆಮಿ ಭಾನುವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ವಿದ್ಯೆ ಒಂದೇ ನಮ್ಮ ಬದುಕನ್ನು ಪರಿಪೂರ್ಣಗೊಳಿಸುವುದಿಲ್ಲ. ವಿದ್ಯೆ ಜೊತೆಗೆ ವಿನಯ, ಸೌಜನ್ಯ, ವಿವಿಧ ಕಲೆಗಳ ಬಗ್ಗೆ ತಿಳಿದುಕೊಂಡಿರಬೇಕು ಎಂದರು.

ತಾಲ್ಲೂಕು ಮಟ್ಟದ ಸಬ್ಜೂನಿಯರ್, ಜೂನಿಯರ್, ಸೀನಿಯರ್ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಚಿತ್ರ ಕಲಾವಿದ ದೇಸಾಯಿ ಅವರು ಕೆಲವೇ ನಿಮಿಷಗಳಲ್ಲಿ ಪರಿಸರದ ಚಿತ್ರ ಬಿಡಿಸಿ ಸೋಷಿಯಲ್ ಕ್ಲಬ್ಗೆ ಕೊಡುಗೆಯಾಗಿ ನೀಡಿದರು.

ವಿಜೇತರಿಗೆ ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ. ಹೊನ್ನಪ್ಪ, ಕಾರ್ಯದರ್ಶಿ ಕೆ.ಆರ್. ಸುದರ್ಶನ್ಬಾಬು, ಶಂಕರ್ನಾರಾಯಣ್ ಏತಾಳ್, ಅಕಾಡೆಮಿಯ ಶಿಕ್ಷಕಿ ಶ್ವೇತಾ, ಅಜಯ್, ಸುಜಯ್ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.