ಹಬ್ಬದ ಪ್ರಯುಕ್ತ ಸೇವಂತಿಗೆ ಒಂದು ಮಾರು ಹೂವಿಗೆ ₹ 80 ರಿಂದ ₹100 ಆಗಿತ್ತು. ತಾವರೆ ಹೂವು ಒಂದಕ್ಕೆ ₹40 ರಿಂದ ₹80, ಹಾರಗಳು ₹100 ರಿಂದ ₹200 ಇತ್ತು. ತುಳಸಿ ಮಾಲೆ, ಸೇವಂತಿಗೆ ಹೂಗಳನ್ನು ಗ್ರಾಹಕರು ಹೆಚ್ಚಾಗಿ ಕೊಂಡರು. ಸ್ಥಳೀಯ ಹೂವು ವ್ಯಾಪಾರಸ್ಥರ ಜೊತೆಗೆ ಹೊಳೆನರಸೀಪುರ, ನಾಗಮಂಗಲ, ಹಾಸನ ತಾಲ್ಲೂಕಿನಿಂದ ವ್ಯಾಪಾರಸ್ಥರು ಹೂವು ಮಾರಲು ಬಂದಿದ್ದರು. ಬೆಂಗಳೂರು ಮಾರಕಟ್ಟೆಯಲ್ಲಿ ಮಲ್ಲಿಗೆ ಮತ್ತು ಕನಕಾಂಬರ ಕೆಜಿಗೆ ₹ 2500 ಕ್ಕೂ ಹೆಚ್ಚು ಇರುವುದರಿಂದ, ಇವುಗಳ ಬೆಲೆ ಪ್ರತಿ ವರ್ಷದಂತೆಯೇ ಇದೆ ಎನ್ನುತ್ತಾರೆ ವ್ಯಾಪಾರಿ ಅವಿನಾಶ್.