ಮನೆಯ ಗೋಡೆ ಹೊರಗಡೆ ವಾಲಿದಾಗ ಚಾವಣಿಯಲ್ಲಿ ಶಬ್ದ ಕೇಳಿ ಬಂದಿದ್ದರಿಂದ ಮನೆಯಲ್ಲಿ ಮಲಗಿದ್ದವರು ಗಾಬರಿಯಿಂದ ಹೊರ ಬಂದಿದ್ದಾರೆ. ಹೀಗಾಗಿ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಪುಟ್ಟೇಗೌಡರ ಪತ್ನಿ, ಮಗಳು ಹಾಗೂ 1.5 ವರ್ಷದ ಕಂದಮ್ಮ ಮನೆಯಲ್ಲಿ ವಾಸವಾಗಿದ್ದರು. ಪುಟ್ಟ ಕಂದಮ್ಮನನ್ನು ರಕ್ಷಿಸುವುದರ ಜೊತೆಗೆ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಹಾರಕ್ಕಾಗಿ ಸಂಗ್ರಹಿಸಿದ್ದ ಎರಡು ಚೀಲ ರಾಗಿ, ಶ್ರಾವಣ ಮಾಸ ಆರಂಭವಾಗಿದ್ದು, ಹಬ್ಬಗಳು ಸಾಲಾಗಿ ಬರುವುದರಿಂದ ಮನೆಯಲ್ಲಿ ಸಂಗ್ರಹಿಸಿದ ರೇಷನ್ ಮಣ್ಣು ಪಾಲಾಗಿದೆ. ಮನೆ ಸೇರಿದಂತೆ ಅಂದಾಜು ರೂ6 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಪಿಡಿಒ ಹಾಗೂ ಕಂದಾಯ ಇಲಾಖೆ ನೌಕರರು ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದಾರೆ.