ಬುಧವಾರ, ಮೇ 18, 2022
23 °C

‘ತ್ಯಾಗಿ’ ಪುಸ್ತಕ ಬಿಡುಗಡೆ 23ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಬಿ.ವಿ.ಚಂದ್ರ ಪ್ರಸಾದ್ ತ್ಯಾಗಿ ಒಡನಾಡಿ ಬಳಗ, ದಲಿತ ಪ್ರಜಾಸತ್ತಾತ್ಮಕ ಸಂಘಟನೆ ಒಕ್ಕೂಟದಿಂದ ಏ.23ರಂದು ಬಿ.ವಿ.ಚಂದ್ರಪ್ರಸಾದ್ ತ್ಯಾಗಿ ಹೋರಾಟದ ಕಥನ ಒಳಗೊಂಡ ‘ತ್ಯಾಗಿ’ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸ ಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಕೆ.ಸಂದೇಶ್‌ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಪ್ರೊ.ರವಿವರ್ಮ ಕುಮಾರ್ ಉದ್ಘಾಟಿಸಲಿದ್ದು, ಪ್ರೊ.ಎಂ.ಎಸ್‌.ಶೇಖರ್‌ ಪ್ರಾಸ್ತಾವಿಕ ನುಡಿ ಗಳನ್ನಾಡಲಿದ್ದಾರೆ. ಪ್ರೊ.ಅರವಿಂದ ಮಾಲಗತ್ತಿ ಪುಸ್ತಕ ಬಿಡುಗಡೆ ಮಾಡಲಿದ್ದು, ರಾಜಪ್ಪ ದಳವಾಯಿ ಪುಸ್ತಕ ಕುರಿತು ಮಾತನಾಡುವರು. ತ್ಯಾಗಿ ಚಂದ್ರಮ್ಮ ಭಾಗವಹಿಸವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡಿಎಸ್‌ಎಸ್‌ ಸಂಸ್ಥಾಪಕ ಸದಸ್ಯ ರಾಗಿದ್ದ ತ್ಯಾಗಿ ನಿಧನರಾಗಿ 16 ವರ್ಷ ಸಂದಿದೆ. ಅವರ ದಲಿತ ಪರ ಚಿಂತನೆ, ಹೋರಾಟ ಬಿಂಬಿಸುವಂತಹ ಕಥನ ಪುಸ್ತಕ ಹೊರ ತರಲಾಗುತ್ತಿದೆ. ತ್ಯಾಗಿ ಸಮಕಾಲೀನವರು, ಹಿತೈಷಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.