ಅರಕಲಗೂಡು: ತಂಬಾಕು ಬೆಲೆ ತಾರತಮ್ಯವನ್ನು ಸರಿಪಡಿಸುವಂತೆ ಅಗ್ರಹಿಸಿ ಜ.5ರಂದು ಹಾಸನದಲ್ಲಿ ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿರುವುದಾಗಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಬಾಕಿಗೂ ವಿಮೆ ಸೌಲಭ್ಯ, ಆರೋಗ್ಯ ವಿಮೆ ಯೋಜನೆ ಜಾರಿಯಾಗಬೇಕು. ಈ ಬಗ್ಗೆ ಸಂಸದರ ಗಮನ ಸೆಳೆಯಲು ಸಂಸದರ ಕಚೇರಿ ಮುಂದೆ ಧರಣಿ ಹಮ್ಮಿಕೊಂಡಿರುವುದಾಗಿ ಹೇಳಿದರು.

‘ತಂಬಾಕು ಮಾರುಕಟ್ಟೆ ಆರಂಭವಾಗಿ ಮೂರು ತಿಂಗಳು ಕಳೆದರೂ ಬೆಲೆಯಲ್ಲಿ ಹೆಚ್ಚಳವಾಗಿಲ್ಲ.₹ 320 ಕ್ಕೆ ಪ್ರಾರಂಭವಾದ ಬೆಲೆ ₹275 -280 ರ ಸರಾಸರಿ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆಂಧ್ರಪ್ರದೇಶದಲ್ಲಿ 145 ಮಿಲಿಯನ್ಗೆ ಬದಲು 250 ಮಿಲಿಯನ್ ತಂಬಾಕು ಬೆಳೆದರೂ ₹450 ಗರಿಷ್ಠ ಬೆಲೆ ಕಂಡುಕೊಂಡಿದೆ. ಈ ಬೆಲೆ ತಾರತಮ್ಯದ ವಿರುದ್ಧ ರಾಜ್ಯದ ಸಂಸದರಾಗಲಿ, ವಾಣಿಜ್ಯ ಇಲಾಖೆಯಾಗಲಿ ಮಾತನಾಡುತ್ತಿಲ್ಲ. ದೇಶಕ್ಕೆ ಒಂದೇ ತಂಬಾಕು ಮಂಡಳಿಯಾದರೂ ಈ ದರ ತಾರತಮ್ಯವೇಕೆ’ ಎಂದು ಪ್ರಶ್ನಿಸಿದರು.

ಕೆಲವರು ನಾವು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡು ಸಂಘವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಆರೋಪಿಸಿದರು.

ರೈತ ಸಂಘದ ಜಿಲ್ಲಾ ಸಂಚಾಲಕ ಬಂದಿಗನಹಳ್ಳಿ ರವಿ, ಸದಸ್ಯರಾದ ಮಂಜುನಾಥ್, ರಮೇಶ್, ಅಣ್ಣಾಜಪ್ಪ, ನಟರಾಜ್, ಈರೇಗೌಡ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.