ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೇಹಳ್ಳಿ: ಲಕ್ಷ್ಮಿ ನರಸಿಂಹ ದೇಗುಲಕ್ಕೆ ಯುನೆಸ್ಕೊ ತಂಡ ಭೇಟಿ

Last Updated 16 ಸೆಪ್ಟೆಂಬರ್ 2022, 4:33 IST
ಅಕ್ಷರ ಗಾತ್ರ

ನುಗ್ಗೇಹಳ್ಳಿ: ‘ಗ್ರಾಮದ ಪುರಾಣ ಪ್ರಸಿದ್ಧ ಲಕ್ಷ್ಮೀ ನರಸಿಂಹ ಸ್ವಾಮಿ ನಮ್ಮ ಮನೆದೇವರು’ ಎಂದು ಪ್ರವಾಸೋದ್ಯಮ ಕಾರ್ಯಪಡೆ ಅಧ್ಯಕ್ಷೆ ಡಾ. ಸುಧಾ ಮೂರ್ತಿ ತಿಳಿಸಿದರು.

ಪುರಾಣ ಪ್ರಸಿದ್ಧ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯಕ್ಕೆ ಯುನೆಸ್ಕೋ ತಜ್ಞರ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬೇಲೂರು, ಹಳೇಬೀಡು, ಮೈಸೂರು ಜಿಲ್ಲೆಯ ಸೋಮನಾಥಪುರದ ಹೊಯ್ಸಳರ ಕಾಲದ ದೇವಾಲಯಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.

ನುಗ್ಗೇಹಳ್ಳಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧ ಹೊಯ್ಸಳರ ಕಾಲದ ದೇವಾಲಯವಾಗಿದ್ದು, ವಿಶೇಷ ಶಿಲಾ ಕಲಾಕೃತಿಗಳಿವೆ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅನೇಕ ವರ್ಷಗಳಿಂದ ದೇವಾಲಯದ ಶಿಖರಗಳು ಶಿಥಿಲಗೊಂಡಿದ್ದು, ಇದರಿಂದ ದೇವಾಲಯದ ಗರ್ಭಗುಡಿಗುಡಿ ಸೋರುತ್ತಿದೆ. ದೇವಾಲಯದ ಅಭಿವೃದ್ಧಿಗೆ ಈ ಭಾಗದ ನಾಗರ ನವಿಲೆಯ ನಾಗರತ್ನಮ್ಮ ಟ್ರಸ್ಟ್ ಜತೆ ಸಹರಿಸುವುದಾಗಿ ತಿಳಿಸಿದ್ದಾರೆ. ಆದರೆ ಪುರಾತತ್ವ ಇಲಾಖೆಯಿಂದ ಒಂದು ವರ್ಷದಿಂದಲೂ ಅನುಮತಿ ದೊರೆತಿಲ್ಲ ಎಂದು ಗ್ರಾಮಸ್ಥರು ಹಾಗೂ ದೇವಾಲಯ ಸಮಿತಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ತಾವು ಪುರಾತತ್ವ ಇಲಾಖೆಗೆ ಬೇಗ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ದೇವಾಲಯಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ದೇವಾಲಯದ ಸಮೀಪ ಹೈಟೆಕ್ ಶೌಚಾಲಯ ಸ್ನಾನ ಗೃಹ ವಸತಿಗೃಹಗಳನ್ನು ನಿರ್ಮಾಣ ಮಾಡುವಂತೆ ಪ್ರವಾಸೋದ್ಯಮ ಇಲಾಖೆಗೆ ತಿಳಿಸುತ್ತೇನೆ ಎಂದರು.

ಯುನೆಸ್ಕೊ ತಂಡದ ಪ್ರತಿನಿಧಿ ಟಿಯಾಂಗ್‌ ಕಿಯಾನ್ ಬೂನ್‌, ಕೇಂದ್ರ ಪುರತತ್ವ ಇಲಾಖೆಯ ಸರ್ವೇಕ್ಷಣಾ ಇಲಾಖೆಯ ಸಹಾಯಕ ಮಹಾನಿರ್ದೇಶಕ ಜಹಾನೀಸ್ ಶರ್ಮ, ನಿರ್ದೇಶಕ ಮದನ್ ಸಿಂಗ್ ಚೌಹಾಣ್, ಪ್ರಾದೇಶಿಕ ನಿರ್ದೇಶಕಿ ಡಾ. ಮಹೇಶ್ವರಿ, ಅಧಿಕ ಬಿಪಿನ್ ಚಂದ್ರ ನೇಗಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಸಂಜಯ್, ಉಪ ತಹಶೀಲ್ದಾರ್ ಗಿರೀಶ್ ಬಾಬು, ಕಂದಾಯ ನಿರೀಕ್ಷಕ ಲೋಕೇಶ್, ಜಗನ್ನಾಥ್, ರಾಜು, ಪ್ರಸನ್ನ ಕೇಶವಾಚಾರ್, ರಾಮ್ ಭಟ್ಟರು, ತೋಟಿ ನಾಗರಾಜು, ದೊರೆಸ್ವಾಮಿ, ಎನ್.ಎಸ್. ಪ್ರಕಾಶ್, ಪಟೇಲ್ ಕುಮಾರಸ್ವಾಮಿ, ಎನ್.ಎಂ. ನಾಗರಾಜು, ಛಾಯಾ ಕೃಷ್ಣಮೂರ್ತಿ, ಹೊನ್ನೇಗೌಡ, ಎನ್.ಎಸ್. ಮಂಜುನಾಥ್, ಹೆಬ್ಬಾಳ್ ರವಿ, ಜಿತೇಂದ್ರ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT