ಗಂಡಸಿ: ‘ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಗಂಡಸಿ ಹ್ಯಾಂಡ್ ಪೋಸ್ಟ್ ವೃತ್ತದ ಸೌಂದರ್ಯ ಹೆಚ್ಚಿಸುವ ದೃಷ್ಟಿಯಿಂದ ವಿಸ್ತರಣೆ ಮಾಡಲಾಗುವುದು. ಜನಪರ ಕೆಲಸಗಳಿಗೆ ಗಂಡಸಿ ಹೋಬಳಿಯ ಜನರು ಕೈಜೋಡಿಸಿ’ ಎಂದು ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ಹೋಬಳಿಯ ಗಂಡಸಿ ಹ್ಯಾಂಡ್ ಪೋಸ್ಟ್ ಸರ್ಕಲ್ನ 4 ರಸ್ತೆಗಳನ್ನು 1 ಕಿ.ಮೀ. ವ್ಯಾಪ್ತಿಯವರೆಗೆ ರಾಜ್ಯ ಹೆದ್ದಾರಿ ಯೋಜನೆಯ ಅಡಿಯಲ್ಲಿ ₹ 7.5 ಕೋಟಿ ವೆಚ್ಚದಲ್ಲಿ ವಿಸ್ತರಣೆ ಮಾಡುವ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವಾಗಿ ಗಂಡಸಿ ಹ್ಯಾಂಡ್ ಪೋಸ್ಟ್ ಸರ್ಕಲ್ ಗುರುತಿಸಿಕೊಂಡಿದೆ. ಬಸ್ ನಿಲ್ದಾಣದ ಅವಶ್ಯಕತೆ ಇದ್ದು, ಅರಸೀಕೆರೆ ರಸ್ತೆಯ ಎಪಿಎಂಸಿ ಬಳಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.

ನೀರಿನ ಸಮಸ್ಯೆ ನಿವಾರಿಸಲು ಹೇಮಾವತಿ ನದಿ ನೀರನ್ನು ₹ 200 ಕೋಟಿ ವೆಚ್ಚದಲ್ಲಿ ಗಂಡಸಿ ಹೋಬಳಿಯ ಕೆರೆಗಳಿಗೆ ಅತಿ ಶೀಘ್ರದಲ್ಲೇ ನೀರು ತುಂಬಿಸಲಾಗುವುದು. ಹೋಬಳಿಯಲ್ಲಿ ಎಲ್ಲ ರಸ್ತೆಗಳು ಸಮರ್ಪಕವಾಗಿದ್ದು, ಕೆಲವೆಡೆ ಅಗತ್ಯವಿರುವ ರಸ್ತೆಗಳನ್ನು ನಿರ್ಮಿಸಲು ₹ 200 ಕೋಟಿ ವೆಚ್ಚದಲ್ಲಿ ಮುಂದಿನ ವಾರ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಗಂಡಸಿ ಸುತ್ತಲಿನ ಜನರು ಶುಭ ಕಾರ್ಯ ನಡೆಸಲು ಗಂಡಸಿ ಹ್ಯಾಂಡ್ ಪೋಸ್ಟ್ನ ಹಾಸನ ರಸ್ತೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಆಗಲಿದೆ. ಹೋಬಳಿಯ ಜನರ ಬಹುದಿನದ ಬೇಡಿಕೆಯಾದ ಗಂಡಸಿ ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಎಂದರು.

ಗ್ರಾಮದ ಸೌಂದರ್ಯವನ್ನು ಹಾಳು ಮಾಡುವ ರೀತಿಯಲ್ಲಿ ಸರ್ಕಲ್ ಬಳಿ ಮುಖ್ಯ ರಸ್ತೆಯಲ್ಲಿ ಕೋಳಿ ಅಂಗಡಿ, ಮಟನ್ ಅಂಗಡಿಗಳು ತಲೆ ಎತ್ತಿದ್ದು, ಇವುಗಳನ್ನು ಅತಿ ಶೀಘ್ರವಾಗಿ ಖಾಲಿ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಯರಗನಾಳು ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಾಮಚಂದ್ರು, ಜಯರಾಮು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಆಗ್ರೋ ಬಾಬು, ಈಶ್ವರಪ್ಪ, ಗುತ್ತಿಗೆದಾರ ವಾಸಣ್ಣ, ಗಂಡಸಿ ಅಯ್ಯಣ್ಣ, ನಾಗರಾಜು, ಕಮಲಮ್ಮ, ನಾಗರಹಳ್ಳಿ ವೆಂಕಟೇಶ್, ಗಿರೀಶ್, ಧರ್ಮಣ್ಣ, ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.