ಬುಧವಾರ, ಜುಲೈ 28, 2021
28 °C
13 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಹಾವೇರಿ ಜಿಲ್ಲೆಯಲ್ಲಿ 15 ಜನರಿಗೆ ಕೋವಿಡ್, ಸೋಂಕಿತರ ಸಂಖ್ಯೆ 405ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹಾವೇರಿ: ನ್ಯಾಯಾಲಯದ ‘ಡಿ’ ಗ್ರೂಪ್ ನೌಕರ ಸೇರಿ ಜಿಲ್ಲೆಯಲ್ಲಿ ಶನಿವಾರ 15 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. 13 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 405 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ. ಇಂದಿನವರೆಗೆ 288 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಒಂಬತ್ತು ಜನರು ಮೃತಪಟ್ಟಿದ್ದಾರೆ. 108 ಪ್ರಕರಣಗಳು ಸಕ್ರಿಯವಾಗಿವೆ.

ಹಾವೇರಿ 4, ಸವಣೂರು, ರಾಣೆಬೆನ್ನೂರು ಹಾಗೂ ಹಾನಗಲ್ ತಲಾ 3 ಹಾಗೂ ಶಿಗ್ಗಾವಿಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಹಾವೇರಿ 6, ಶಿಗ್ಗಾವಿಯ 3, ಬ್ಯಾಡಗಿಯ ಇಬ್ಬರು, ಹಾನಗಲ್ ಹಾಗೂ ಹಿರೇಕೆರೂರಿನ ತಲಾ ಓರ್ವರು ಬಿಡುಗಡೆ ಹೊಂದಿದ್ದಾರೆ.

ಸೋಂಕಿತರ ವಿವರ

ಹಾವೇರಿ ಮೆಹಬೂಬ ನಗರದ 62 ವರ್ಷದ ಪುರುಷ, ಶಿಗ್ಗಾವಿ ತಾಲ್ಲೂಕಿನ 30 ವರ್ಷದ ಮಹಿಳೆ, ಹಾನಗಲ್‌ನ 35 ವರ್ಷದ ಪುರುಷ, ಹಾವೇರಿಯ 35 ವರ್ಷದ ಮಹಿಳೆ, ಸವಣೂರಿನ 45 ವರ್ಷದ ಪುರುಷ, ರಾಣೆಬೆನ್ನೂರಿನ 68 ವರ್ಷದ ಮಹಿಳೆ, ಹಾವೇರಿಯ 50 ವರ್ಷದ ಮಹಿಳೆ, ಶಿಗ್ಗಾವಿಯ 57 ವರ್ಷದ ಪುರುಷ, ಸವಣೂರಿನ 27 ವರ್ಷದ ಪುರುಷ, ಹಾನಗಲ್‍ನ 25 ವರ್ಷದ ಯುವಕ, ರಾಣೆಬೆನ್ನೂರಿನ 29 ವರ್ಷದ ಮಹಿಳೆ, ರಾಣೆಬೆನ್ನೂರಿನ 70 ವರ್ಷದ ವೃದ್ಧೆ, ಹಾನಗಲ್‍ನ 20 ವರ್ಷದ ಯುವಕ, ಸವಣೂರಿನ 20 ವರ್ಷದ ಯುವಕ, ಹಾವೇರಿಯ 46 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ನಿಯಮದ ಪ್ರಕಾರ ಅಂತ್ಯಸಂಸ್ಕಾರ

ಶನಿವಾರದ ಲ್ಯಾಬ್ ವರದಿಯಲ್ಲಿ ಸೋಂಕಿತರ ಪಾಸಿಟಿವ್ ಬಂದ ಪ್ರಕಣಗಳ ಪೈಕಿ ಪಿ-57120 ಹಾವೇರಿ ಮೆಹಬೂಬ್‌ ನಗರದ 62 ವರ್ಷದ ಪುರುಷ ಧಾರವಾಡ ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಜುಲೈ 10ರಂದು ಮೃತರಾಗಿದ್ದಾರೆ ಹಾಗೂ ಪಿ-59901 ಸೋಂಕಿತೆ ರಾಣೇಬೆನ್ನೂರಿನ ಪೀರಜಾದೆ ಗಲ್ಲಿಯ 70 ವರ್ಷದ ಮಹಿಳೆ ಜುಲೈ 15ರಂದು ಮೃತರಾಗಿದ್ದಾರೆ. ಜುಲೈ 17ರಂದು ಪಾಸಿಟಿವ್ ದೃಢಪಟ್ಟಿದ್ದು, ಈಗಾಗಲೇ ಕೋವಿಡ್ ನಿಯಮಾವಳಿ ಅನುಸಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಹಾನಗಲ್‌ನ ಚಿದಂಬರ ನಗರದ 25 ವರ್ಷದ ಯುವಕ (ಪಿ- 59896) ಪಿ-35005 ಪ್ರಾಥಮಿಕ ಸಂಪರ್ಕ ಹೊಂದಿದವನಾಗಿದ್ದು, ಹಾನಗಲ್ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ‘ಡಿ’ ಗ್ರೂಪ್ ನೌಕರನಾಗಿದ್ದಾನೆ. ಶಿಗ್ಗಾವಿಯ ಮಲ್ಲಿಕಾರ್ಜುನ ನಗರದ 30 ವರ್ಷದ ಮಹಿಳೆ (ಪಿ-58368) ಐ.ಎಲ್.ಐ. ಲಕ್ಷಣ ಕಾರಣ ಜುಲೈ 7ರಂದು ಮಾದರಿ ಸಂಗ್ರಹಿಸಲಾಗಿತ್ತು. ಜುಲೈ 17ರಂದು ಪಾಸಿಟಿವ್ ಬಂದಿದೆ.  

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ‘ಕಂಟೈನ್‍ಮೆಂಟ್ ಜೋನ್’ ಹಾಗೂ ‘ಬಫರ್ ಜೋನ್’ ಆಗಿ ಘೋಷಿಸಿ ಆಯಾ ತಾಲ್ಲೂಕು ತಹಶೀಲ್ದಾರ್‌ಗಳನ್ನು ಇನ್ಸಿಡೆಂಟಲ್ ಕಮಾಂಡರ್ ಆಗಿ ನೇಮಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು