ಬುಧವಾರ, ಮೇ 18, 2022
23 °C
ಜನತಾ ಜಲಧಾರೆಗೆ ಸ್ವಾಗತ: ಜಯಾನಂದ ಜಾವಣ್ಣನವರ ಹೇಳಿಕೆ

ಶಾಶ್ವತ ನೀರಾವರಿ ಯೋಜನೆಗೆ ಕ್ರಮ: ಜಯಾನಂದ ಜಾವಣ್ಣನವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಸಮುದ್ರಕ್ಕೆ ಸೇರುತ್ತಿರುವ ನದಿಗಳ ನೀರನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ರೈತರ ಬದುಕನ್ನು ಹಸನು ಮಾಡುವ ಮೂಲ ಉದ್ದೇಶ ನಮ್ಮದಾಗಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಯಾನಂದ ಜಾವಣ್ಣನವರ ಹೇಳಿದರು. 

ವರದಾ ನದಿಯ ಗಂಗೆಗೆ ವಿಶೇಷ ಪೂಜೆ ಸಲ್ಲಿಸಿ, ನದಿಯ ಜಲವನ್ನು ಬಿಂದಿಗೆಯಲ್ಲಿ ತುಂಬಿಕೊಂಡು ‘ಜನತಾ ಜಲಧಾರೆ’ ರಥಯಾತ್ರೆಯು ನಗರದ ಪುರಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತದ ಮುಖಾಂತರ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಬಂದು ತಲುಪಿದ ಸಂದರ್ಭ ಅವರು ಮಾತನಾಡಿದರು. 

‘ದೇಶದಲ್ಲಿ 75 ವರ್ಷ ನಮ್ಮನ್ನಾಳಿದ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ನದಿಗಳ ನೀರನ್ನು ಬಳೆಕ ಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಕೃಷ್ಣಾ 3ನೇ ಹಂತ ಹಾಗೂ ಮಹದಾಯಿ ಯೋಜನೆಯ ಅನುಷ್ಠಾನ ಬಿಜೆಪಿ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲಿಲ್ಲ. ಶೇ 40ರ ಕಮಿಷನ್‌ ದಂಧೆಯಲ್ಲಿ ಬಿಜೆಪಿ ಸರ್ಕಾರ ಮುಳುಗಿದೆ ಎಂದು ಆರೋಪಿಸಿದರು. 

ಜೆಡಿಎಸ್‌ ಮುಖಂಡರಾದ ಕೆ.ಎಂ. ಸುಂಕದ, ಮಹಾಂತೇಶ ಬೇವಿನಹಿಂಡಿ, ಕೆ.ಎಸ್.ಸಿದ್ದಬಸಪ್ಪ ಯಾದವ್, ಕತಲಸಾಬ ಬಣಕಾರ, ಮಲ್ಲಿಕಾರ್ಜುನ ಹಲಗೇರಿ, ಅಮೀರಜಾನ ಬೇಫಾರಿ, ಉಮೇಶ ತಳವಾರ, ಸುನೀಲ ದಂಡೆಮ್ಮನವರ, ರೀಟಾ ನಾಯ್ಕರ, ಇಮ್ರಾನ ಹುಬ್ಬಳ್ಳಿ, ಮಂಜುನಾಥ ಕನ್ನನಾಯ್ಕರ, ಮಲ್ಲಿಕಾರ್ಜುನ ಅರಳಿ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು