ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೃತ್ತಿ ಬದ್ಧತೆಯಿಂದ ಲಭಿಸಲಿದೆ ಮೆಚ್ಚುಗೆ

Published 3 ಜುಲೈ 2024, 14:14 IST
Last Updated 3 ಜುಲೈ 2024, 14:14 IST
ಅಕ್ಷರ ಗಾತ್ರ

ಬಾಣಾವರ: ವೃತ್ತಿಯಲ್ಲಿ ಬದ್ಧತೆ ಇದ್ದಾಗ ಮಾತ್ರ ಸಮುದಾಯದ ಮೆಚ್ಚುಗೆ ಪಡೆಯಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ತಿಳಿಸಿದರು.

ಹೋಬಳಿಯ ಹಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಮುಖ್ಯ ಶಿಕ್ಷಕ ರಾಮಸ್ವಾಮಿಯನ್ನು ಸನ್ಮಾನಿಸಿ ಅವರು ಮಾತನಾಡಿದರು, ಇಂಗ್ಲೀಷ್ ಭಾಷೆ ಮೇಲೆ ಹಿಡಿತ ಹೊಂದಿದ್ದ ರಾಮಸ್ವಾಮಿಯವರು ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅನೇಕ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಸೇವೆ ಸಲ್ಲಿಸಿರುವ ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲೀಷ್ ಬಹಳ ಸರಳ ಎನಿಸಿದ ವ್ಯಕ್ತಿ, ಶಾಲಾ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಮತ್ತು ಶಾಲೆಗೂ ಸುಂದರ ರೂಪವನ್ನು ಕೊಡುವಲ್ಲಿ, ದಾನಿಗಳನ್ನು ಸೆಳೆಯುವ ಚಾಣಾಕ್ಷತೆ ಇವರಲ್ಲಿತ್ತು ಎಂದರು.

ಬಿಆರ್ ಸಿ ಶಂಕರ್, ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲೇಶ್, ಪ್ರಬಾರಿ ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತ್ ಕುಮಾರ್, ಚಿದಾನಂದ್, ಹಿರಿಯೂರುರೇವಣ್ಣ, ಸದಾನಂದ ಮೂರ್ತಿ, ಜಯರಾಮ್, ರೇಣುಕಾರಾಧ್ಯ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT