ಶಿಗ್ಗಾವಿ: ಕಳೆದ ಮೂರು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಬಂಕಾಪುರ ಸರ್ಕಾರಿ ಆಸ್ಪತ್ರೆ ಸೋರುತ್ತಿದೆ. ಅದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆಗೆ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರ ಇಂತಹ ಕಟ್ಟಡಗಳನ್ನು ದುರಸ್ಥಿ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಆಸ್ಪತ್ರೆಯ ಜನರಲ್ ವಾರ್ಡ್ನಲ್ಲರುವ ಹೊಸ ಕಟ್ಟಡ ಸೋರುತ್ತಿದೆ. ಅದಕ್ಕಾಗಿ ರೋಗಿಗಳು ಚಿಕಿತ್ಸೆ ಪಡೆಯುವ ಹಾಸಿಗೆ ಹತ್ತಿರದಲ್ಲಿ ಮಳೆ ನೀರು ತೋರುತ್ತಿದೆ. ರೋಗಿಗಳು ತಮ್ಮ ರೋಗದಿಂದ ನೆರಳುವುದು ಒಂದೆಡೆಯಾದರೆ. ಈ ಕಡೆ ಸೋರುವ ಕಟ್ಟಡ ಕಿರಿಕಿರಿ ಕಾಡುತ್ತಿದೆ. ಗ್ರಾಮೀಣ ಪ್ರದೇಶದ ರೋಗಿಗಳು ಸೋರುತ್ತಿರುವ ವಾರ್ಡಿನಲ್ಲಿಯೇ ಚಿಕಿತ್ಸೆ ಪಡೆಯುವಂತಾಗಿದೆ.

ಆರೋಗ್ಯಕರ ವಾತಾವರಣ ಮೂಡಿಸುವ ಮೂಲಕ ರೋಗಿಗಳಿಗೆ ಬಂದಿರುವ ಕಾಯಿಲೆಗಳನ್ನು ದೂರಾಗುತ್ತದೆ ಎಂಬ ನಂಬಿಕೆಯಿಂದ ಆಸ್ಪತ್ರೆಗೆ ಬರುತ್ತಿದ್ದಾರೆ. ಆದರೆ ವ್ಯವಸ್ಥಿತವಾದ ಕಟ್ಟಡವಿಲ್ಲದೆ. ಸೋರುವ ಕಟ್ಟಡದಲ್ಲಿ ರೋಗಿಗಳು ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿದೆ. ಮಳೆ ನೀರು ಆಸ್ಪತ್ರೆ ನಡುವೆ ನಿಂತು ಹೋಗಿದೆ. ಅದನ್ನು ಹೊರ ಹಾಕುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸುತ್ತಲಿನ ಗ್ರಾಮೀಣ ಪ್ರದೇಶದ ಜನರಿಂದ ನಿತ್ಯ ಜನದಟ್ಟಣೆಯಿಂದ ತುಂಬಿ ತುಳುಕುತ್ತಿದೆ. ವೈದ್ಯರ, ಸಿಬ್ಬಂದಿ ಕೊರತೆ ಕಾಡುತ್ತಿದೆ. ಅಲ್ಲದೆ ಮೂಲ ಸೌಕರ್ಯಗಳ ಕೊರತೆ ಇಲ್ಲದಂತಾಗಿದೆ. ಇಲ್ಲಿನ ರೋಗಿಗಳಿಗೆ ಸರಿಯಾದ ಶೌಚಾಲಯ ಸಹ ಇಲ್ಲದಂತಾಗಿದೆ. ಸುಮಾರು 30 ಹಾಸಿಗೆ ಹೊಂದಿರುವ ಸರ್ಕಾರಿ ಆಸ್ಪತ್ರೆ ವೈದ್ಯರ, ಸ್ಟಾಪ್ ನರ್ಸ್ಗಳ ಕೊರತೆಯಿಂದ ಬರುವ ರೋಗಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲದಾಗಿದೆ. ಅದರಲ್ಲಿಯೇ ಇದ್ದ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಮಳೆ ನೀರಿನಿಂದ ಕಟ್ಟಡ ಸೋರುವುದರಿಂದ ಆಸ್ಪತ್ರೆ ಸಿಬ್ಬಂದಿಗೂ ಸಹ ತೊಂದರೆಯಾಗುತ್ತಿದೆ.

ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಸೋರುತ್ತಿದ್ದು ಮಕ್ಕಳು ಮರಿಗಳ ಚಿಕಿತ್ಸೆಗಾಗಿ ಬರುವ ಜನರಿಗೆ ತೊಂದರೆಯಾಗುತ್ತಿದೆ. ತಕ್ಷಣ ದುರಸ್ತಿ ಮಾಡಬೇಕು.
ನಿಜಾಮ್ ಸೊಲ್ಲಾಪುರ, ಸ್ಥಳೀಯ ನಿವಾಸಿ

ಆಸ್ಪತ್ರೆಯಲ್ಲಿ ಸಕಲ ಸೌಕರ್ಯಗಳಿಲ್ಲದೆ ಮತ್ತು ವೈದ್ಯರ ಕೊರತೆಯಿಂದ ಬರುವ ರೋಗಿಗಳನ್ನು ಚಿಕಿತ್ಸೆಗಾಗಿ ಶಿಗ್ಗಾವಿ, ಹುಬ್ಬಳ್ಳಿ ಮತ್ತು ಹಾವೇರಿಗೆ ಹೋಗುವಂತಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿ ಇಲ್ಲ. ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯರಿಲ್ಲ. ಜನರಲ್ ಮೆಡಿಕಲ್ ವೈದ್ಯರಿಲ್ಲ. ಇತ್ತೀಚೆಗೆ ಆನೆಸ್ತೇಶಿಯಾ ( ಅರವಳಿಕೆ) ವೈದ್ಯರ ವರ್ಗಾವಣೆ ಜತೆಗೆ ಇಲ್ಲಿನ ಹುದ್ದೆ ರದ್ದು ಪಡಿಸಿದ್ದಾರೆ. ಹುದ್ದೆ ಇದ್ದರೆ ಬೇರೆ ವೈದ್ಯರನ್ನು ನೇಮಕ ಮಾಡಲು ಬರುತ್ತದೆ. ಆದರೆ ವೈದ್ಯರ ಹುದ್ದೆಗಳನ್ನು ಕಡಿತಗೊಳಿಸುವುದನ್ನು ಖಂಡಿಸುತ್ತೇವೆ ಎಂದು ಸಾರ್ವಜನಿಕರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.