ರಾಣೆಬೆನ್ನೂರು: ತಾಲ್ಲೂಕಿನ ಮೇಡ್ಲೇರಿ ಗ್ರಾಮದಲ್ಲಿ ಬೀರೇಶ್ವರ ದೇವಸ್ಥಾನ ಸೇವಾ ಸಮಿತಿಯಿಂದ ಬೀರೇಶ್ವರ ಸ್ವಾಮಿಯ ಪಂಚಮಿ ಹಬ್ಬದ ಜಾತ್ರಾ ಮಹೋತ್ಸವ ಜುಲೈ 24ರಿಂದ 29ರವರೆಗೆ ಜಾತ್ರಾ ಮಹೋತ್ಸವ ಒಂದು ವಾರದವರೆಗೆ ವಿಜೃಂಭಣೆಯಿಂದ ನೆರವೇರಲಿದೆ.

ಸದರ ಇಳಿಯುವುದು: ಗುರುವಾರ ರಾತ್ರಿ ದೇವರ ಸದರ ಇಳಿಯುವ ಕಾರ್ಯಕ್ರಮವು ಗ್ರಾಮದ ರಾಜ ಬೀದಿಗಳಲ್ಲಿ ಸ್ವಾಮಿಯ ಮೆರವಣಿಗೆಯೊಂದಿಗೆ ನಡೆಯಿತು. ಒಳಗುಡಿ ಬೀರೇಶ್ವರ ದೇವಸ್ಥಾನದಿಂದ ಹೊರಗುಡಿ ಬೀರೇಶ್ವರ ದೇವಸ್ಥಾನಕ್ಕೆ ಮೆರವಣಿಗೆ ಆಗಮಿಸಿ ಸಂಪನ್ನಗೊಂಡಿತು.

ತುಂಗಭದ್ರಾ ನದಿ ಪೂಜೆ: ಶುಕ್ರವಾರ ನಸುಕಿನ ಜಾವ ಸುರಿಯುತ್ತಿರುವ ಮಳೆಯಲ್ಲಿಯೇ ಬೀರೇಶ್ವರ ಸ್ವಾಮಿಯ ಪಾಲಕಿ ಉತ್ಸವ ಹಾಗೂ ಹೊಳೆ ಚಾಕರಿ ಕಾರ್ಯಕ್ರಮ ಸಕಲ ಬಿರುದಾವಳಿಗಳೊಂದಿಗೆ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು. ಬೀರೇಶ್ವರ ಸ್ವಾಮಿಯ ಹೊರಗುಡಿಯಿಂದ ಉತ್ಸವದ ಮೂಲಕ ತುಂಗಭದ್ರಾ ನದಿ ತೀರಕ್ಕೆ ತೆರಳಿತು. ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ನದಿಯಲ್ಲಿ ಬೀರದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮರಳಿ ಪಾಲಕಿ ಉತ್ಸವವು ಹೊರಗುಡಿ ತುಂಬಿತು. ಮಹಿಳೆಯರು ಛತ್ರ ಚಾಮರ ಬೀಸಿದರು. ಭಕ್ತರು ಏಳುಕೋಟಿ ಏಳುಕೋಟಿಗೋ ಚಾಂಗ್ಮಲೋ ಎನ್ನುವ ಜೈಘೋಷ ಕೂಗಿದರು. ಪರಸ್ಪರ ಬಂಡಾರ ಹಚ್ಚಿ ಸಂತೋಷ ಹಂಚಿಕೊಂಡರು.

ಮಳೆ ಸುರಿಯುತ್ತಿದ್ದುದರಿಂದ ಭಕ್ತರು ಕಂಬಳಿ ಹೊತ್ತು ಸಾಗಿದರು. ನಂತರ ಹೊರ ಗುಡಿಯಲ್ಲಿ ಬೀರೇಶ್ವರ ಸ್ವಾಮಿಗೆ ಬಾಳೆ ದಿಂಡು ಮತ್ತು ಹೂಗಳ ಅಲಂಕಾರ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಹರಕೆ, ಜವುಳ ಕಾರ್ಯಕ್ರಮಗಳು, ಹಣ್ಣು–ತುಪ್ಪದ ಪ್ರಸಾದ ವಿತರಣೆ ನೆರವೇರಿತು.

ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳು, ಪೂಜಾರರು, ಬುಡ್ಡಾಳರು, ಕೂನಬೇವು, ಗುರಿಕಾರರು, ಅಣ್ಣೆರ, ಬಡಪ್ಪಳವರ, ನಗಾರಿಯರು, ರ್ಯಾವಳರು, ಕೋಲ್ಕಾರ, ಗ್ವಾರಪ್ಪರ ಮನೆತನದವರು ಭಾಗವಹಿಸಿದ್ದರು. ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದರೂ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.