ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಸ್ಮಶಾನದ ಹತ್ತಿರದ ಬ್ರಿಡ್ಜ್ ಪಕ್ಕದ ಗೋಡೆಗೆ ನಿಲ್ಲಿಸಿದ ಬೋರ್ಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಹೇಶ ಷಡಕ್ಷರಯ್ಯ ಹಿರೇಮಠ(22) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
ಮೃತನು ಬಿ.ಎಸ್.ಸಿ ನರ್ಸಿಂಗ್ ಓದುತ್ತಿದ್ದು, ಮೂಲತಃ ವಿಜಯಪುರದ ಸಿಂದಗಿ ತಾಲ್ಲೂಕಿನ ಓತಿಹಾಳ ನಿವಾಸಿ ಎಂದು ಗುರುತಿಸಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ: ವ್ಯಕ್ತಿ ಸಾವು ಶಿಗ್ಗಾವಿ:ತಾಲ್ಲೂಕಿನ ಬಂಕಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾಗರ ದಾಬಾ ಹತ್ತಿರ ಕಾರು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಬಂಕಾಪುರ ಪಟ್ಟಣದ ಹುಲಗೆಪ್ಪ ನಿಂಗಪ್ಪ ಗುಳೇದ (51) ಮೃತ ವ್ಯಕ್ತಿ. ಕಾರು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.