ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ಟಿ ಚಾಕರಿ ಜೀತ ಪದ್ಧತಿಗಿಂತ ಕ್ರೂರ: ಡಾ.ಕಿರಣಕಮಲ್‌ ಪ್ರಸಾದ್‌

Last Updated 14 ಜುಲೈ 2021, 15:45 IST
ಅಕ್ಷರ ಗಾತ್ರ

ಹಾವೇರಿ: ಬಿಟ್ಟಿ ಚಾಕರಿ ಅನಿಷ್ಟ ಪದ್ಧತಿಯಾಗಿದ್ದು, ಇದನ್ನು ಹೋಗಲಾಡಿಸಲು ‘ಜೀತ ವಿಮುಕ್ತ ಕರ್ನಾಟಕ’ ಸಂಘಟನೆಯು ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ ಎಂದು ‘ಜೀವಿಕ’ ರಾಜ್ಯ ಸಂಚಾಲಕ ಡಾ.ಕಿರಣಕಮಲ್‌ ಪ್ರಸಾದ್‌ ಹೇಳಿದರು.

ನಗರದಅಂಬೇಡ್ಕರ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ‘ಬಿಟ್ಟಿ ಚಾಕರಿ’ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಜೀತ ಸಮಸ್ಯೆ ಮತ್ತು ಬಿಟ್ಟಿ ಚಾಕರಿ ವ್ಯವಸ್ಥೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಅನಿಷ್ಟ ಪದ್ಧತಿಯಿಂದ ದಲಿತ ಸಮುದಾಯವನ್ನು ರಕ್ಷಿಸಬೇಕಿದೆ. ಜೀತ ಪದ್ಧತಿಯಂತೆ ಇರುವ ಬಿಟ್ಟಿ ಚಾಕರಿಯು ಅತ್ಯಂತ ಕ್ರೂರ ಪದ್ಧತಿ ಎಂದು ಅಭಿಪ್ರಾಯಪಟ್ಟರು.

ಬಿಟ್ಟಿ ಚಾಕರಿ ಪದ್ಧತಿ ಹೋಗಲಾಡಿಸಲು ‘ಜೀವಿಕ’ ಸಂಘಟನೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ 8 ದಿನಗಳಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸಮೀಕ್ಷೆ ನಡೆಸಿ ಬಿಟ್ಟಿ ಚಾಕರಿಯ ಫಲಾನುಭವಿಗಳನ್ನು ಗುರುತಿಸಲಾಗಿದೆ. ಗುರುತಿಸಿದಂತಹ ಫಲಾನುಭವಿಗಳಿಗೆ ಜೀತ ಕಾನೂನಿನಡಿ ಜೀತದಾಳುಗಳಿಗೆ ಸಿಗುವಂತಹ ಎಲ್ಲ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸುತ್ತೇವೆ ಎಂದರು.

ಸರ್ಕಾರದಿಂದ ಸೌಲಭ್ಯ ಒದಗಿಸಬೇಕು ಎಂದು ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ‘ಜೀವಿಕ’ ಜಿಲ್ಲಾ ಉಸ್ತುವಾರಿ ಸಂಚಾಲಕ ನಾರಾಯಣಸ್ವಾಮಿ, ಜಿ.ವಿ.ರವಿಕುಮಾರ, ನರಸಿಂಹಮೂರ್ತಿ, ಸುರೇಶ, ಆದಿ ಜಾಂಬವ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯಗಾಂಧಿ ಸಂಜೀವಣ್ಣನವರ, ವಕೀಲ ಎಸ್‌.ಜಿ.ಹೊನ್ನಪ್ಪನವರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT